Failed to fetch language order
Failed to fetch language order
Failed to fetch language order
ರಾಜಕಾರಣಿಗಳು ಮತ್ತು ಅಧಿಕಾರಿ ವರ್ಗದವರಿಗೆ ಉನ್ನತ ಸ್ಥಾನ ಭಾಗ್ಯ - ಮಂಗಳವಾರ ರಾಶಿ ಭವಿಷ್ಯ -ಜನವರಿ-9,2024
14 Posts • 100 views
Ram Ajekar
609 views 12 days ago
#💐ಮಂಗಳವಾರದ ಶುಭಾಶಯಗಳು ತುಳುನಾಡಿನ ಸಂಸ್ಕೃತಿಯ ವೈಶಿಷ್ಟ್ಯ ... ತುಳುನಾಡಿನ ಸಂಸ್ಕೃತಿಯ ವಿಶೇಷತೆ ಎಂದರೆ ಅಕ್ಟೋಬರ್ ಅಂತ್ಯದಿಂದ ಮೇ ಮೊದಲ ವಾರದವರೆಗೆ ನಡೆಯುವ ಕಂಬಳ ಮತ್ತು ಕೋಲಗಳ ಋತು. ಈ ಅವಧಿಯಲ್ಲಿ ಗ್ರಾಮಗಳ ಗರಡಿಗಳಲ್ಲಿ ವಾರ್ಷಿಕ ಕೋಲ ಮತ್ತು ಜಾತ್ರೆಗಳು ಜೋರಾಗಿ ನಡೆಯುತ್ತವೆ. ಈ ಸಂದರ್ಭಕ್ಕೆ ಮುಂಬಯಿ, ಗೋವಾ ಅಥವಾ ಬೇರೆ ಊರುಗಳಲ್ಲಿ ವಾಸಿಸುತ್ತಿರುವ ತುಳುನಾಡಿನ ಜನರು ತಮ್ಮ ಮೂಲ ಗ್ರಾಮಗಳಿಗೆ ಬಂದು ಭಾಗವಹಿಸುತ್ತಾರೆ. ವಿಶೇಷವಾಗಿ ಮದುವೆಯಾಗಿ ಹಳ್ಳಿಯ ಹೊರಗೆ ಹೋದ ಮದುಮಕ್ಕಳು ಕೋಲಕ್ಕೆ ಬರಬೇಕು ಎನ್ನುವ ಪುರಾತನ ವಾಡಿಕೆ ಇಂದಿಗೂ ಜೀವಂತವಾಗಿದೆ. ಹಳೆಯ ಮನೆಗಳಲ್ಲಿ ಹೊಸ ಬಟ್ಟೆ ತೊಟ್ಟು ಜಾತ್ರೆಗೆ ಬರುವ ಸಂಪ್ರದಾಯದ ಚಂದ ಇಂದಿಗೂ ಮಾಸಿಲ್ಲ. ಪ್ರತಿಯೊಂದು ಗರಡಿಯ ಕೋಲ ಮುಗಿದ ನಂತರ ಕೋಳಿ ಅಂಕಗಳು ನಡೆಯುವುದು ಸಹ ಸಾಮಾನ್ಯ. ಕೆಲವು ಕಡೆಗಳಲ್ಲಿ ಇವು ನಾಮಕಾವಸ್ಥೆಯಂತೆ ನಡೆಯುತ್ತವೆ. ಸರ್ಕಾರ ಕೋಳಿ ಅಂಕ (ಜೂಜು)ಗಳನ್ನು ನಿಷೇಧಿಸಿದ್ದರೂ, ಕೆಲವು ಪ್ರದೇಶಗಳಲ್ಲಿ ಇನ್ನೂ ಗುಪ್ತವಾಗಿ ಹಳ್ಳಿಯೊಳಗೆ ಅಥವಾ ಕಾಡಂಚಿನ ಜಾಗಗಳಲ್ಲಿ ಇಂತಹ ಆಟಗಳು ನಡೆಯುತ್ತಲೇ ಇರುತ್ತವೆ. ಒಮ್ಮೆ ಇಂತಹ ಒಂದು ಘಟನೆ ತುಳುನಾಡಿನ ಹಳ್ಳಿಯೊಂದರಲ್ಲಿ ನಡೆಯಿತು. ಅಂದು ಎರಡು ರಾಜಕೀಯ ಪಕ್ಷಗಳ ನಡುವೆ ಜಂಗಿ ಕುಸ್ತಿ ನಡೆಯುತ್ತಿತ್ತು. ಸ್ಥಳೀಯ ಆಡಳಿತ ಪಕ್ಷದ ಒಬ್ಬ ನಾಯಕ ಕೋಳಿ ಅಂಕವನ್ನು ನಡೆಸಿದ್ದ. ಆದರೆ ವಿರೋಧ ಪಕ್ಷದ ಯುವಕನೊಬ್ಬ ಆ ಕೋಳಿ ಅಂಕದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಲೈವ್ ಮಾಡಿ ಹಂಚಿಕೊಂಡ. ಆ ವೀಡಿಯೋ ಇಲಾಖಾ ಅಧಿಕಾರಿಗಳ ಕಣ್ಣಿಗೆ ಬಿದ್ದ ತಕ್ಷಣ ಅವರು ಸ್ಥಳಕ್ಕೆ ಧಾವಿಸಿದರು. ಪೋಲೀಸರು ಬಂದು ಕೋಳಿ ಅಂಕವನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು. ಆ ಸಮಯದಲ್ಲಿ ಬಾಜಿ ಕಟ್ಟಿದ್ದ ಜನರು ದಿಕ್ಕುಪಾಲಾಗಿ ಓಡಿಹೋದರು. ಯಾರು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ವಿಚಾರಿಸಿದಾಗ ಯಾರೂ ಬಾಯಿಬಿಟ್ಟಿರಲಿಲ್ಲ. ಆದರೆ ನಂತರ ಸಾಮಾಜಿಕ ಜಾಲತಾಣದ ಲೈವ್ ಮೂಲಕ ಎಲ್ಲಾ ಗೊತ್ತಾಯಿತು. ಪರಿಶೀಲನೆ ನಡೆಸಿದಾಗ, ಆ ವೀಡಿಯೋ ಹಾಕಿದ ಯುವಕನೇ ಕೋಳಿ ಅಂಕದಲ್ಲಿ ಸೋತು ಹಣ ಕಳೆದುಕೊಂಡಿದ್ದಾನೆಂಬುದು ಬಹಿರಂಗವಾಯಿತು. ಆತನೇ ಆಡಳಿತ ಪಕ್ಷದ ಸದಸ್ಯನಾಗಿದ್ದರಿಂದ ಈ ವಿಷಯಕ್ಕೆ ರಾಜಕೀಯ ಬಣ್ಣ ತಗುಲಿತು. ಅಂತಿಮವಾಗಿ ಪೋಲೀಸರು ಕೋಳಿಯನ್ನೂ, ಅಂಕದ ಆಯೋಜಕರನ್ನೂ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದರು. ಕೋಳಿ ಅಂಕವನ್ನು ನಿಲ್ಲಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾದರು. ಸಂಸ್ಕೃತಿಯ ಉತ್ಸವಗಳು ಅಗತ್ಯ, ಆದರೆ ಜೂಜಾಟಗಳು ತಪ್ಪು. ಸಂಸ್ಕೃತಿಯನ್ನು ಕಾಪಾಡುವುದು ನಮ್ಮ ಕರ್ತವ್ಯ, ಹಾಸ್ಯದ ಮಾತು ಏನೆಂದರೆ ಕೋಳಿ ಅಂಕ ನಿಲ್ಲಿಸಲು ಓಡಿಬಂದ ಕೆಲವು ಇಲಾಖಾ ಅಧಿಕಾರಿಗಳ ಮನೆಗಳಲ್ಲಿ ಅಲ್ಲಿಯ ನಾಟಿ ಕೋಳಿಯು ಬಣಲೆಯಲ್ಲಿ ಬೇಯುತ್ತಿತ್ತು . ರಾಂ ಅಜೆಕಾರು ಕಾರ್ಕಳ http://ramajekar.travel.blog/2025/10/14/daily-stories-13/ #ಮಂಗಳವಾರ #ರಾಜಕಾರಣಿಗಳು ಮತ್ತು ಅಧಿಕಾರಿ ವರ್ಗದವರಿಗೆ ಉನ್ನತ ಸ್ಥಾನ ಭಾಗ್ಯ - ಮಂಗಳವಾರ ರಾಶಿ ಭವಿಷ್ಯ -ಜನವರಿ-9,2024 #ಶುಭ ಮಂಗಳವಾರ #ಶುಭ ಮಂಗಳವಾರ
9 likes
8 shares
Ram Ajekar
574 views 19 days ago
#💐ಮಂಗಳವಾರದ ಶುಭಾಶಯಗಳು ಕಂಬಳ: ಶಕ್ತಿಗಿಂತ ಪರಿಶುದ್ಧತೆ, ಶಿಸ್ತು ಮತ್ತು ಭಕ್ತಿಯೇ ಅದರ ನಿಜವಾದ ಬಲ. ಅಂದಿನ ದಿನಗಳು ಅದೆಷ್ಟು ಮಧುರವಾಗಿದ್ದವು ಊರಿನಲ್ಲಿ ಹಬ್ಬವೊಂದು ಬಂದರೆ ಅಲ್ಲಿ ಎಲ್ಲರೂ ಒಂದೇ ಮನಸ್ಸು ಅದೇ ನಮ್ಮ ಕಂಬಳ. ಬಲೇ ಕಂಬಳ ಪೋಯಿ, ಎಂದು ಹೊರಡುವುದುಂಟು. ಅದು ಕೇವಲ ಓಟವಲ್ಲ, ಅದು ಸಂಪ್ರದಾಯದ ಪ್ರತೀಕ , ನಂಬಿಕೆಯ ಉತ್ಸವ, ಹಳ್ಳಿಯ ಜನರ ಪರಂಪರೆಯ ಬದುಕು, ಕೃಷಿಯ ಚಟುವಟಿಕೆ ಮುಗಿಸಿ, ಆ ದಿನ ಹಳ್ಳಿಯ ಗದ್ದೆಗಳು ಹಬ್ಬದ ಪ್ರಾಂಗಣದಂತಾಗುತ್ತಿದ್ದವು. ಹಳ್ಳಿಯಲ್ಲೆಲ್ಲಾ ಉತ್ಸಾಹದ ಸಂಚಲನ. ಹೊಸ ಬಟ್ಟೆ ಧರಿಸಿದ ಪುರುಷರು, ಬಂಗಾರದಂತೆ ಅಲಂಕರಿಸಿದ ಸ್ತ್ರೀಯರು, ಮಕ್ಕಳ ಕೈಯಲ್ಲಿ ಪತ್ತಾಸು, ಚುರುಂಬುರಿ ಮಿಠಾಯಿ, ಲಾಡುಗಳ ಪರಿಮಳ. ಗದ್ದೆಗಳಲ್ಲಿ ಕೋಣಗಳ ನಡುಗಾಟ, ನೀರಿನ ಚಿಮುಕಾಟ, ಎಲ್ಲವೂ ಸೇರಿ ಒಂದು ಕಂಬಳದ ದಿನವನ್ನು ರೂಪಿಸುತ್ತಿತ್ತು. ಇದರಲ್ಲಿ ಲಾಭ ಯಾವುದೂ ಇಲ್ಲ, ಆದರೆ ಬಾಂಧವ್ಯದ ಬಲು ಅಮೂಲ್ಯ. ತುಳುನಾಡಿನ ಎಲ್ಲ ಧರ್ಮದ ಜನರು ಒಂದಾಗಿ ಭಾಗವಹಿಸುವುದು ಇದರ ವೈಶಿಷ್ಟ್ಯ. ಕಂಬಳವು ಕೇವಲ ಸ್ಪರ್ಧೆಯಾಗದೆ ಅದು ಒಗ್ಗಟ್ಟಿನ ಆಚರಣೆಯು ಇತ್ತು. ಆದರೆ, ಈ ಸಂಪ್ರದಾಯದ ಸೊಬಗಿನಲ್ಲಿ ಒಂದು ದುಃಖದ ಪುಟವೂ ಇದೆ. ಸುಮಾರು ೪೦ ವರ್ಷಗಳ ಹಿಂದೆ ನಡೆದ ಘಟನೆಯೊಂದು ಇನ್ನೂ ಹಳ್ಳಿಯ ಹಿರಿಯರ ನೆನಪಿನಲ್ಲಿ ಜೀವಂತವಾಗಿದೆ. ಆ ದಿನ ಕಂಬಳದ ಓಟಕ್ಕೆ ರಾಜು ಪರವ ಎಂಬ ಯುವ ಓಟಗಾರ ಅಣಿಯಾಗಿದ್ದ. ಆತ ಉತ್ಸಾಹಿ, ಆದರೆ ಮದ್ಯದ ನಶೆಯಲ್ಲಿ ಮರೆತು ಹೋಗಿದ್ದನು. ಹಿರಿಯರು ಎಚ್ಚರಿಸಿದರೂ, ಅವನ ಮನಸ್ಸು ಕೇಳಲಿಲ್ಲ. ಕೋಣಗಳ ಕಣ್ಣಲ್ಲಿ ಸಿಟ್ಟು ಹೊಳೆಯುತ್ತಿತ್ತು, ಸಂಪ್ರದಾಯಿಕ ಕಂಬಳದ ಕಾರಣ ದೈವದಂತೆ ತೋರುವ ಆ ಕೋಣಗಳು ಆ ದಿನ ಅಸಹನೀಯವಾದ ನೋವಿನ ಕತೆಯ ಸಾಕ್ಷಿಯಾದವು. ಓಟ ಆರಂಭವಾಯ್ತು ನೀರಿನ ಚಿಮುಕಾಟದ ನಡುವೆ ಆಕಸ್ಮಿಕವಾಗಿ ಒಂದು ಕೋಣ ದಾಳಿ ನಡೆಸಿತು. ಅದರ ಚೂಪಾದ ಕೊಂಬು ರಾಜು ಪರವನ ದೇಹವನ್ನು ಬಿಸುಕಿತ್ತು. ಜನರು ನಿಶ್ಚೇತನರಾದರು, ಹಬ್ಬದ ಹರ್ಷ ಕ್ಷಣದಲ್ಲಿ ಮೌನದ ತೀವ್ರತೆಯಾಯಿತು. ಆತನ ಜೀವವು ಆ ಮಣ್ಣಿನಲ್ಲೇ ಕರಗಿತು, ಕಂಬಳದ ಗದ್ದೆ ತನ್ನ ಮಣ್ಣಿನ ಮಗನನ್ನು ಕಳೆದುಕೊಂಡಿತು. ಆ ದಿನದಿಂದ ಹಳ್ಳಿಯವರು ಕಲಿತರು ಕಂಬಳ ಎಂದರೆ ಕೇವಲ ಶಕ್ತಿ ಪ್ರದರ್ಶನವಲ್ಲ, ಅದು ಸಂಸ್ಕಾರದ ಗೌರವ. ಕೋಣಗಳು ದೇವರ ರೂಪ, ಅವುಗಳೊಡನೆ ನಡೆಯುವ ಪ್ರತಿಯೊಂದು ಕ್ಷಣವೂ ಭಕ್ತಿ, ಶಿಸ್ತು ಮತ್ತು ಗೌರವದಿಂದಿರಬೇಕು. ಇಂದಿಗೂ ಹಳ್ಳಿಯಲ್ಲಿ ಕಂಬಳ ನಡೆಯುತ್ತದೆ ಆದರೆ ಆ ದಿನದ ಕಥೆಯನ್ನು ಹಿರಿಯ ಕಾಳು ನಾಯ್ಕರು ಹೇಳಿದಾಗ, ಯುವಕರು ಮೌನವಾಗುತ್ತಾರೆ. ಕಂಬಳದ ನೀರಿನಲ್ಲಿ ಆತನ ಪ್ರತಿಬಿಂಬ ಇನ್ನೂ ತೋರುತ್ತದೆ ಎನ್ನುವುದು ಹಳ್ಳಿಯ ನಂಬಿಕೆ. ಒಂದೆಡೆ ದೈವಭಕ್ತಿ, ಮತ್ತೊಂದೆಡೆ ನಿರ್ಲಕ್ಷ್ಯದಿಂದ ಹುಟ್ಟಿದ ದುಃಖ ಈ ಕಥೆ ಕಂಬಳದ ಆತ್ಮಕ್ಕೆ ಎಚ್ಚರಿಕೆಯ ಕನ್ನಡಿ. #ಮಂಗಳವಾರ #ಶುಭ ಮಂಗಳವಾರ #ಶುಭ ಮಂಗಳವಾರ #ರಾಜಕಾರಣಿಗಳು ಮತ್ತು ಅಧಿಕಾರಿ ವರ್ಗದವರಿಗೆ ಉನ್ನತ ಸ್ಥಾನ ಭಾಗ್ಯ - ಮಂಗಳವಾರ ರಾಶಿ ಭವಿಷ್ಯ -ಜನವರಿ-9,2024 ರಾಂ‌ಅಜೆಕಾರು ಕಾರ್ಕಳ http://ramajekar.travel.blog/2025/10/07/dailystories-3/
7 likes
9 shares
Ram Ajekar
719 views 2 months ago
#🙏ಸಂಕಷ್ಟ ಚತುರ್ಥಿ🌼 ಮಣ್ಣಿನ ಕನಸು ಒಡೆದ ಕ್ಷಣ ಅದು ಒಂದು ಹಳ್ಳಿ ನೂರಕ್ಕೂ ಹೆಚ್ಚು ಮನೆಗಳಿದ್ದವು. ಬೆಳಗಿನ ತಂಪು ಗಾಳಿ, ಹೊಲದ ಮೇಲೆ ಮಂಜು ತೇಲುತ್ತಿತ್ತು. ಕುಂಬಾರನೊಬ್ಬ ತನ್ನ ಕೈಯಿಂದ ರೂಪಿಸಿದ ಇಪ್ಪತ್ತಕ್ಕೂ ಹೆಚ್ಚು ಮಡಿಕೆಗಳನ್ನು ಮಾರಾಟಕ್ಕೆ ಕೊಂಡೊಯ್ಯಲು ಸಿದ್ಧನಾದ. ಮಣ್ಣಿನ ವಾಸನೆ ಇನ್ನೂ ಆ ಮಡಿಕೆಗಳ ಮೇಲೆ ಜೀವಂತವಾಗಿತ್ತು. ಕೋಲನ್ನು ಭುಜದ ಮೇಲೆ ಅಡ್ಡವಿಟ್ಟು, ಎರಡೂ ತುದಿಗಳಲ್ಲಿ ಜಾಗ್ರತೆಯಿಂದ ಮಡಿಕೆಗಳನ್ನು ಕಟ್ಟಿಕೊಂಡಿದ್ದ. ಪ್ರತಿಯೊಂದು ಮಡಿಕೆಯೂ ಅವನ ಶ್ರಮದ ಸಂಕೇತ — ಮಣ್ಣು ತಂದು, ನೀರು ಕಲಸಿ, ಕೈ ಚಕ್ರದ ಮೇಲೆ ತಿರುಗಿಸಿ, ಹೊತ್ತ ದಿನಗಳಲ್ಲಿ ಒಣಗಿಸಿ, ಬಿಸಿ ಬೆಂಕಿಯೊಳಗೆ ಬೇಯಿಸಿ ತಯಾರಿಸಿದ್ದ. ಸುಮಾರು ಆರು ಕಿಲೋಮೀಟರ್ ನಡೆಯುತ್ತಾ ಹೋದ. ಹಾದಿಯಲ್ಲಿ ಹುಲ್ಲಿನ ವಾಸನೆ, ಹಳ್ಳಿಯ ಮಕ್ಕಳ ಆಟ, ಎಲ್ಲವೂ ಅವನಿಗೆ ಚಿರಪರಿಚಿತ. ಆದರೆ ಮಾರಾಟ — ಸುಲಭವಲ್ಲ. ಇಡೀ ಹಳ್ಳಿಯಲ್ಲಿ ಎರಡು ಮಡಿಕೆ ಮಾತ್ರ ಮಾರಾಟವಾದವು. ಉಳಿದವು ಅವನ ಭುಜದ ಮೇಲೆಯೇ ಭಾರವಾಗಿ ನೇತು ಹಾಕಿಕೊಂಡಿದ್ದವು. ಆದರೆ ಅವನ ಜೀವನದ ಆ ದಿನ, ನಿಜವಾದ ದುರಂತವನ್ನು ಇನ್ನೂ ಕಾಯುತ್ತಿತ್ತು. ಹಳ್ಳಿಯ ಕೊನೆಯ ತುದಿಯಲ್ಲಿ ಒಬ್ಬ ಶ್ರೀಮಂತನ ಬಂಗಲೆಯ ಹತ್ತಿರ ಹಾದು ಹೋಗುತ್ತಿದ್ದ. ಅಲ್ಲಿ ಇದ್ದ ದೊಡ್ಡ ಕಪ್ಪು ನಾಯಿ ಅವನನ್ನು ಕಂಡ ತಕ್ಷಣ ಕಿಡಿಕಾರಿತು. ಭುಜದ ಮೇಲಿದ್ದ ಮಡಿಕೆಗಳ ಜರಗಾಟ ನಾಯಿ ಕಿವಿಗೆ ಕುತ್ತಾಗಿ ಇರಬಹುದೇನೋ — ಅದು ಬಿರುಸಿನಿಂದ ಅಟ್ಟಿಸಿಕೊಂಡು ಬಂತು. ಬಡ ಕುಂಬಾರನು ಆತಂಕದಿಂದ ಓಡಿದ. ಭುಜದ ಮೇಲೆ ತೂಗುತ್ತಿದ್ದ ಕೋಲು ಎಡಬಲ ಚಲಿಸಿ, ಮಡಿಕೆಗಳು ಒದೆತೊಡೆತವಾಗಿ ಶಬ್ದ ಮಾಡುತ್ತಾ ಕುಸಿದವು. ಒಂದು, ಎರಡು, ಮೂರು… ಅವನ ಕಣ್ಣೆದುರೇ ನೆಲಕ್ಕೆ ಬಿದ್ದು ಚೂರಾದವು. ಮಣ್ಣಿನ ತುಂಡುಗಳು ಹೊಲದ ಮಣ್ಣಿಗೆ ಬೆರೆತು ಹೋದವು — ಆದರೆ ಅವು ಕೇವಲ ಮಣ್ಣಿನ ತುಂಡುಗಳಲ್ಲ. ಅವು ಅವನ ನಿದ್ದೆಯಿಲ್ಲದ ರಾತ್ರಿ, ಹೊತ್ತ ದಿನಗಳಲ್ಲಿ ಉರಿದ ಕೈಗಳು, ಮಳೆಯಲಿ ಮಣ್ಣನ್ನು ಕಾಯ್ದು ಉಳಿಸಿದ ಹೋರಾಟ — ಅವುಗಳ ಅವಶೇಷಗಳು. ನಾಯಿ ಏನೂ ತಿಳಿಯಲಿಲ್ಲ. ಶ್ರೀಮಂತನಿಗೂ ತಿಳಿಯಲಿಲ್ಲ. ಅವರಿಗಿದು ಕೇವಲ ಕೆಲವು ಮಡಿಕೆಗಳು ಒಡೆದ ಕಥೆ. ಆದರೆ ಕುಂಬಾರನಿಗೆ ಇದು ಅವನ ಬಾಳಿನ ಒಂದು ಭಾಗ ಒಡೆದು ಹೋದ ಕ್ಷಣ. ಅವನು ನೆಲದ ಮೇಲೆ ಕುಳಿತ. ತುಂಡುಗಳನ್ನು ಕೈಯಲ್ಲಿ ಹಿಡಿದು ನೋಡಿದ. “ಈ ತುಂಡುಗಳನ್ನು ಮತ್ತೆ ಸೇರಿಸೋಕೆ ಆಗುವುದಿಲ್ಲ. ಹೀಗೇ ನನ್ನ ಜೀವನವೂ…” — ಹೃದಯದೊಳಗೆ ಮಾತು ಆಳಕ್ಕೆ ಕುಸಿಯಿತು. ಮಣ್ಣಿನ ಕಲೆಗೆ ಜೀವ ತುಂಬುವವನು, ಇಂದು ತನ್ನ ಜೀವವೇ ಖಾಲಿಯಾಗಿದಂತೆ ಭಾವಿಸಿದ. ಹಾದಿ ಮುಂದುವರಿದರೂ, ಅವನ ಮನಸ್ಸು ಅಲ್ಲಿ, ಒಡೆದ ಮಡಿಕೆಗಳ ಜೊತೆ ಬಿಟ್ಟುಕೊಂಡೇ ಉಳಿಯಿತು. #ಮಂಗಳವಾರ #ಶುಭ ಮಂಗಳವಾರ #ಶುಭ ಮಂಗಳವಾರ ರಾಂ‌ ಅಜೆಕಾರು ಕಾರ್ಕಳ #ClayPot #EarthenPot #Tulunad #TulunaduCulture #TulunaduTradition #TulunaduHeritage #TulunadBeauty #TulunaduVibes #TulunadLifestyle #TulunaduArt #TulunaduLove #TulunaduCraft #TulunaduPride #TulunaduStories #TulunaduPhotography #TulunaduNature #TulunaduLife #TulunaduStyle #TulunaduFolk #TulunaduVillage #TulunaduTravel #TulunaduRoots #TulunaduFestival #TulunaduHistory #TulunaduMagic #TulunaduCultureVibes #TulunaduTraditions #ರಾಜಕಾರಣಿಗಳು ಮತ್ತು ಅಧಿಕಾರಿ ವರ್ಗದವರಿಗೆ ಉನ್ನತ ಸ್ಥಾನ ಭಾಗ್ಯ - ಮಂಗಳವಾರ ರಾಶಿ ಭವಿಷ್ಯ -ಜನವರಿ-9,2024
3 likes
7 shares