#💐ಮಂಗಳವಾರದ ಶುಭಾಶಯಗಳು
ಕಂಬಳ: ಶಕ್ತಿಗಿಂತ ಪರಿಶುದ್ಧತೆ, ಶಿಸ್ತು ಮತ್ತು ಭಕ್ತಿಯೇ ಅದರ ನಿಜವಾದ ಬಲ.
ಅಂದಿನ ದಿನಗಳು ಅದೆಷ್ಟು ಮಧುರವಾಗಿದ್ದವು ಊರಿನಲ್ಲಿ ಹಬ್ಬವೊಂದು ಬಂದರೆ ಅಲ್ಲಿ ಎಲ್ಲರೂ ಒಂದೇ ಮನಸ್ಸು ಅದೇ ನಮ್ಮ ಕಂಬಳ. ಬಲೇ ಕಂಬಳ ಪೋಯಿ, ಎಂದು ಹೊರಡುವುದುಂಟು.
ಅದು ಕೇವಲ ಓಟವಲ್ಲ, ಅದು ಸಂಪ್ರದಾಯದ ಪ್ರತೀಕ , ನಂಬಿಕೆಯ ಉತ್ಸವ, ಹಳ್ಳಿಯ ಜನರ ಪರಂಪರೆಯ ಬದುಕು, ಕೃಷಿಯ ಚಟುವಟಿಕೆ ಮುಗಿಸಿ, ಆ ದಿನ ಹಳ್ಳಿಯ ಗದ್ದೆಗಳು ಹಬ್ಬದ ಪ್ರಾಂಗಣದಂತಾಗುತ್ತಿದ್ದವು.
ಹಳ್ಳಿಯಲ್ಲೆಲ್ಲಾ ಉತ್ಸಾಹದ ಸಂಚಲನ. ಹೊಸ ಬಟ್ಟೆ ಧರಿಸಿದ ಪುರುಷರು, ಬಂಗಾರದಂತೆ ಅಲಂಕರಿಸಿದ ಸ್ತ್ರೀಯರು, ಮಕ್ಕಳ ಕೈಯಲ್ಲಿ ಪತ್ತಾಸು, ಚುರುಂಬುರಿ ಮಿಠಾಯಿ, ಲಾಡುಗಳ ಪರಿಮಳ. ಗದ್ದೆಗಳಲ್ಲಿ ಕೋಣಗಳ ನಡುಗಾಟ, ನೀರಿನ ಚಿಮುಕಾಟ, ಎಲ್ಲವೂ ಸೇರಿ ಒಂದು ಕಂಬಳದ ದಿನವನ್ನು ರೂಪಿಸುತ್ತಿತ್ತು.
ಇದರಲ್ಲಿ ಲಾಭ ಯಾವುದೂ ಇಲ್ಲ, ಆದರೆ ಬಾಂಧವ್ಯದ ಬಲು ಅಮೂಲ್ಯ. ತುಳುನಾಡಿನ ಎಲ್ಲ ಧರ್ಮದ ಜನರು ಒಂದಾಗಿ ಭಾಗವಹಿಸುವುದು ಇದರ ವೈಶಿಷ್ಟ್ಯ. ಕಂಬಳವು ಕೇವಲ ಸ್ಪರ್ಧೆಯಾಗದೆ ಅದು ಒಗ್ಗಟ್ಟಿನ ಆಚರಣೆಯು ಇತ್ತು.
ಆದರೆ, ಈ ಸಂಪ್ರದಾಯದ ಸೊಬಗಿನಲ್ಲಿ ಒಂದು ದುಃಖದ ಪುಟವೂ ಇದೆ. ಸುಮಾರು ೪೦ ವರ್ಷಗಳ ಹಿಂದೆ ನಡೆದ ಘಟನೆಯೊಂದು ಇನ್ನೂ ಹಳ್ಳಿಯ ಹಿರಿಯರ ನೆನಪಿನಲ್ಲಿ ಜೀವಂತವಾಗಿದೆ.
ಆ ದಿನ ಕಂಬಳದ ಓಟಕ್ಕೆ ರಾಜು ಪರವ ಎಂಬ ಯುವ ಓಟಗಾರ ಅಣಿಯಾಗಿದ್ದ. ಆತ ಉತ್ಸಾಹಿ, ಆದರೆ ಮದ್ಯದ ನಶೆಯಲ್ಲಿ ಮರೆತು ಹೋಗಿದ್ದನು. ಹಿರಿಯರು ಎಚ್ಚರಿಸಿದರೂ, ಅವನ ಮನಸ್ಸು ಕೇಳಲಿಲ್ಲ. ಕೋಣಗಳ ಕಣ್ಣಲ್ಲಿ ಸಿಟ್ಟು ಹೊಳೆಯುತ್ತಿತ್ತು, ಸಂಪ್ರದಾಯಿಕ ಕಂಬಳದ ಕಾರಣ ದೈವದಂತೆ ತೋರುವ ಆ ಕೋಣಗಳು ಆ ದಿನ ಅಸಹನೀಯವಾದ ನೋವಿನ ಕತೆಯ ಸಾಕ್ಷಿಯಾದವು.
ಓಟ ಆರಂಭವಾಯ್ತು ನೀರಿನ ಚಿಮುಕಾಟದ ನಡುವೆ ಆಕಸ್ಮಿಕವಾಗಿ ಒಂದು ಕೋಣ ದಾಳಿ ನಡೆಸಿತು. ಅದರ ಚೂಪಾದ ಕೊಂಬು ರಾಜು ಪರವನ ದೇಹವನ್ನು ಬಿಸುಕಿತ್ತು. ಜನರು ನಿಶ್ಚೇತನರಾದರು, ಹಬ್ಬದ ಹರ್ಷ ಕ್ಷಣದಲ್ಲಿ ಮೌನದ ತೀವ್ರತೆಯಾಯಿತು. ಆತನ ಜೀವವು ಆ ಮಣ್ಣಿನಲ್ಲೇ ಕರಗಿತು, ಕಂಬಳದ ಗದ್ದೆ ತನ್ನ ಮಣ್ಣಿನ ಮಗನನ್ನು ಕಳೆದುಕೊಂಡಿತು.
ಆ ದಿನದಿಂದ ಹಳ್ಳಿಯವರು ಕಲಿತರು ಕಂಬಳ ಎಂದರೆ ಕೇವಲ ಶಕ್ತಿ ಪ್ರದರ್ಶನವಲ್ಲ, ಅದು ಸಂಸ್ಕಾರದ ಗೌರವ. ಕೋಣಗಳು ದೇವರ ರೂಪ, ಅವುಗಳೊಡನೆ ನಡೆಯುವ ಪ್ರತಿಯೊಂದು ಕ್ಷಣವೂ ಭಕ್ತಿ, ಶಿಸ್ತು ಮತ್ತು ಗೌರವದಿಂದಿರಬೇಕು.
ಇಂದಿಗೂ ಹಳ್ಳಿಯಲ್ಲಿ ಕಂಬಳ ನಡೆಯುತ್ತದೆ ಆದರೆ ಆ ದಿನದ ಕಥೆಯನ್ನು ಹಿರಿಯ ಕಾಳು ನಾಯ್ಕರು ಹೇಳಿದಾಗ, ಯುವಕರು ಮೌನವಾಗುತ್ತಾರೆ. ಕಂಬಳದ ನೀರಿನಲ್ಲಿ ಆತನ ಪ್ರತಿಬಿಂಬ ಇನ್ನೂ ತೋರುತ್ತದೆ ಎನ್ನುವುದು ಹಳ್ಳಿಯ ನಂಬಿಕೆ.
ಒಂದೆಡೆ ದೈವಭಕ್ತಿ, ಮತ್ತೊಂದೆಡೆ ನಿರ್ಲಕ್ಷ್ಯದಿಂದ ಹುಟ್ಟಿದ ದುಃಖ ಈ ಕಥೆ ಕಂಬಳದ ಆತ್ಮಕ್ಕೆ ಎಚ್ಚರಿಕೆಯ ಕನ್ನಡಿ.
#ಮಂಗಳವಾರ #ಶುಭ ಮಂಗಳವಾರ #ಶುಭ ಮಂಗಳವಾರ #ರಾಜಕಾರಣಿಗಳು ಮತ್ತು ಅಧಿಕಾರಿ ವರ್ಗದವರಿಗೆ ಉನ್ನತ ಸ್ಥಾನ ಭಾಗ್ಯ - ಮಂಗಳವಾರ ರಾಶಿ ಭವಿಷ್ಯ -ಜನವರಿ-9,2024
ರಾಂಅಜೆಕಾರು ಕಾರ್ಕಳ
http://ramajekar.travel.blog/2025/10/07/dailystories-3/

