Ram Ajekar
ShareChat
click to see wallet page
@ajekarram
ajekarram
Ram Ajekar
@ajekarram
journalist
#🪕✨ದೀಪಾವಳಿಯ ಟ್ರೆಂಡಿಂಗ್ ಹಾಡುಗಳು 🎶 ಪಾತ್ರೆಗಳಿಗೂ ನೀರಿನ ಹಂಡೆಗೂ ದೇವರ ಭಾವ ತುಂಬಿರುವುದು ತುಳುನಾಡಿನ ಸಂಸ್ಕೃತಿಯ ವಿಶಿಷ್ಟತೆ. ಕರಾವಳಿಯ ತುಳುನಾಡಿನಲ್ಲಿ ದೀಪಾವಳಿ ಹಬ್ಬದ ಸಂಭ್ರಮಕ್ಕೆ ಇಂದು ಅಧಿಕೃತ ಚಾಲನೆ ದೊರೆತಿದೆ. ಪರಂಪರೆ, ಭಕ್ತಿ ಮತ್ತು ಕುಟುಂಬ ಒಗ್ಗಟ್ಟಿನ ಸುಗಂಧ ತುಂಬಿದ ಈ ಹಬ್ಬದ ಆರಂಭವಾಗಿದ್ದು *ಲನೀರು ತುಂಬುವ ಹಬ್ಬ"ಲದ ಆಚರಣೆಯಿಂದ. ಲಲ. ಮನೆಯ ಅಂಗಳವನ್ನು ಶುದ್ಧಗೊಳಿಸಿ, ಸ್ನಾನಕ್ಕೆ ಬಳಸುವ ಹಂಡಗಳು, ಕೊಡಪಾನಗಳು ಹಾಗೂ ಪಾತ್ರೆಗಳು ಅಲಂಕರಿಸಲ್ಪಡುತ್ತವೆ. ಬಳಿಕ ಮನೆಯ ಬಾವಿಯಿಂದ ನೀರು ಸೇದುತ್ತಾ, ಮೊದಲು ಬಾವಿಗೆ ಪೂಜೆ ಸಲ್ಲಿಸುತ್ತಾರೆ ಜೀವದ ಮೂಲವಾದ ನೀರಿಗೆ ಕೃತಜ್ಞತೆ ಸಲ್ಲಿಸುವ ಈ ಸಂಪ್ರದಾಯ ಪೀಳಿಗೆಯಿಂದ ಪೀಳಿಗೆ ಸಾಗುತ್ತಿದೆ. ನೀರು ತರಲು ಹೊರಟಾಗ ಭಜನೆ ಹಾಗೂ ಜಾಗಟೆ ವಾತಾವರಣ ಭಕ್ತಿಯ ನಾದದಿಂದ ತುಂಬಿ ಹೋಗುತ್ತದೆ. ಪೂಜೆಯೊಡನೆ ನೀರನ್ನು ಹೊತ್ತು ತಂದು ನೀರಿನ ಹಂಡೆಗೆ ಸುರಿಸುವ ಪದ್ದತಿಯನ್ನು ಅತ್ಯಂತ ಭಕ್ತಿಭಾವದಿಂದ ನೆರವೇರಿಸಲಾಗುತ್ತದೆ. ನೀರಿನ ಪಾತ್ರೆಗಳು ಹಂಡೆಗಳು ಕೂಡ ದೇವರಾಗುತ್ತವೆ ಎಂದರು ತಪ್ಪಲ್ಲ. ಇದರಿಂದ ಮನೆಯಲ್ಲಿ ಶುದ್ಧತೆ, ಶಾಂತಿ ಮತ್ತು ಆನಂದ ನೆಲೆಸುತ್ತದೆ ಎಂಬ ನಂಬಿಕೆ ಇದೆ. ಬಳಿಕ ಸೋಮವಾರದ ನರಕ ಚತುರ್ದಶಿ ಹಿನ್ನೆಲೆಯಲ್ಲಿ ಅಭ್ಯಂಗ ಸ್ನಾನದ ಆಚರಣೆಯೂ ನಡೆಯಲಿದೆ. ಈ ಸಂದರ್ಭದಲ್ಲಿ ದೇಹಕ್ಕೆ ಹಳದಿ ಮತ್ತು ತೆಂಗಿನ ಎಣ್ಣೆ ಹಚ್ಚಿ ಶುದ್ಧ ಸ್ನಾನ ಮಾಡುವ ಪರಂಪರೆ ಇಂದಿಗೂ ಇದೆ.., ಸಂಸ್ಕೃತಿಯ ಕಳೆಗೂ ಬೆಳಕು ಹರಿಯುತ್ತದೆ. ಹಳ್ಳಿಹಳ್ಳಿಗಳಲ್ಲಿ ಈ ಹೊತ್ತಿನಲ್ಲೇ ಮಾಂಕಾಳಿ ನೃತ್ಯ, ಪರಿಯು ನೃತ್ಯಗಳು ಸೇರಿದಂತೆ ನೂರಾರು ಜನಪದ ರೂಪಗಳು ಪುನಃ ಜೀವಂತವಾಗುತ್ತವೆ. ದೀಪಾವಳಿ ಹಬ್ಬ ಸದಾ ಖುಷಿಯ ತರಲಿ .. ರಾಂ ಅಜೆಕಾರು ಕಾರ್ಕಳ http://ramajekar.travel.blog/2025/10/19/daily-stories-16/
#🪕✨ದೀಪಾವಳಿಯ ಟ್ರೆಂಡಿಂಗ್ ಹಾಡುಗಳು 🎶
🪕✨ದೀಪಾವಳಿಯ ಟ್ರೆಂಡಿಂಗ್ ಹಾಡುಗಳು 🎶 - ~ ~ - ShareChat
ಒಂದು ನೀರಿನ ಹನಿ ಅದೊಂದು ನೀರಿನ ಹನಿ ಮಳೆ ನಿಂತುಹೋಗಿದ್ದರೂ, ಆ ಹನಿಯು ಮರದ ಎಲೆಗಳಿಂದ ಜಾರಿಕೊಂಡು ಫಠಕ್ ಎಂದು ಮನೆಯ ಹಂಚಿನ ಛಾವಣಿಯ ಮೇಲೆ ಬಿತ್ತು. ಮಳೆ ನಿಂತರೂ ಮತ್ತೆ ಸುರಿಯುವ ಆಸೆಯ ಮಳೆಹನಿ ಇನ್ನೊಂದು ಹನಿಯನ್ನು ಹಾಳು ಮಾಡದೆ ಭೂಮಿಗೆ ಸೇರಲು ತವಕಿಸುತ್ತಿತ್ತು. ಸಾಗರವೆಂಬುದು ನೀರಿನ ಹನಿಗಳಿಂದಲೇ ಆಗಿದೆ. ಸಮುದ್ರ, ಕೆರೆ, ನದಿ ಎಲ್ಲವು ನೀರಿನ ಮೂಲಗಳೇ. ಸಕಲ ಪ್ರಾಣಿ–ಪಕ್ಷಿಗಳ ಬದುಕಿಗೆ ಒಂದೇ ಹನಿ ನೀರು ಸಾಕಷ್ಟೆ. ಬದುಕಿನ ವ್ಯತ್ಯಾಸಗಳೂ ಹಾಗೆಯೇ — ನೀರಿನ ಹನಿಗಳಂತೆ. ಒಮ್ಮೆ ಬಿತ್ತು ಹೋದರೆ ಮತ್ತೆ ಮರಳಿ ಬರುವುದಿಲ್ಲ. ಸಮಯ ಕಳೆದುಹೋದರೆ ಸಿಗುವುದಿಲ್ಲ; ಹಾಗೆಯೇ ಬದುಕು ಕೂಡ. ಒಮ್ಮೆ ಯಾವುದೋ ಸನ್ನಿವೇಶದಲ್ಲಿ ತುಂಬಾ ಬಾವುಕನಾಗಿದ್ದೆ. ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು. “ಸೋತೆಯಾ?” ಎಂಬ ಪ್ರಶ್ನೆಗೆ ಕಣ್ಣೀರು ಉತ್ತರಿಸಿತ್ತು. ಆದರೆ ಆಗ ಬಂದ ಮಳೆ, ಕಣ್ಣೀರನ್ನು ತೊಳೆದು ತನ್ನ ಹನಿಯೊಂದಿಗೆ ಕಳೆದುಹೋದಿತು. “ಕಣ್ಣೀರಿನ ಜೊತೆ ನಾನಿದ್ದೀನಿ” ಎಂದು ಮಳೆ ಹನಿ ಭರವಸೆ ನೀಡಿದಾಗ, ಹೃದಯದಲ್ಲಿ ಹೊಸ ಖುಷಿ ಭರವಸೆ ಮೂಡಿತ್ತು. ನೋವಿನೊಂದಿಗೆ ಬಂದ ನಾಳೆಯ ಭರವಸೆಗಳು ನಮ್ಮನ್ನು ಇನ್ನಷ್ಟು ಗಟ್ಟಿಯನ್ನಾಗಿಸಿವೆ. ಒಮ್ಮೆ ಬಟ್ಟೆ ಒಗೆದು ಒಣಗಿಸಲು ಸರಿಗೆಯ ಮೇಲೆ ಹಾಕುತ್ತಿದ್ದೆ. ಭಾರಿ ಬಿಸಿಲು ಮೇ ತಿಂಗಳ ಎರಡನೇ ವಾರ. ಬಿಸಿಯ ಕಾವಿನಲ್ಲಿ ಕೆಂಪಿರುವೆಗಳೊಂದು ಸರಿಗೆಯ ಮೇಲಿನಿಂದ ಸಾಗುತ್ತಿದ್ದವು. ಬಿಸಿಗೆ ಬಸವಳಿದಿರಬೇಕು. ನೆಲಕ್ಕೆ ಬಿದ್ದವು. ಆದರೂ ಒಗೆದ ಬಟ್ಟೆಯ ಮೇಲಿನ ನೀರಿನ ಹನಿಗಳು ಕೆಂಪಿರುವೆಗಳ ಮೇಲೆ ಬಿದ್ದು ಅವುಗಳಿಗೆ ಜೀವ ನೀಡಿದವು. ಒಂದು ಹನಿ ನೀರು ಬಿದ್ದಾಗ, “ಅಬ್ಬಾ, ಬದುಕಿದೆ ಬಡ ಜೀವ!” ಎಂದು ಅನಿಸಿದಂತಾಯಿತು. ಅದು ಕೂಡ ಒಂದು ಹನಿ ನೀರು. ಕಣ್ಣೀರಾದರೂ ಅದರಲ್ಲಿದೆ ನೋವಿನ ಮೌಲ್ಯ; ಮಳೆಯಾದರೂ ಅದರಲ್ಲಿದೆ ಪ್ರೀತಿಯ ಮೌಲ್ಯ. ಬಟ್ಟೆ ಒಗೆದ ನೀರಿನ ಹನಿಯೂ ಕೆಂಪಿರುವೆಗೆ ಜೀವ ಉಳಿಸಿದ ಮೌಲ್ಯವಿತ್ತು. . ರಾಂ‌ ಅಜೆಕಾರು ಕಾರ್ಕಳ #ಸ್ಪೂರ್ತಿ ದಾಯಕ ಮಾತು ಗಳು👌👍 #ಶುಕ್ರವಾರ #ಶುಭ ಶುಕ್ರ ವಾರ 🌸🌸🌸🌸 #ಶುಕ್ರ ಗೌರೀ ಶುಭಾಶಯ #ಶುಭ ಶುಕ್ರ ವಾರ 🙏🏻
ಸ್ಪೂರ್ತಿ ದಾಯಕ ಮಾತು ಗಳು👌👍 - Ram Ajekar official Ram Ajekar official - ShareChat
#💐ಗುರುವಾರದ ಶುಭಾಶಯಗಳು ತೆರೆಮರೆಯ ಕಂಬಳ ಸಾಧಕರ ಕಥೆ ಅದೊಂದು ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಕಂಬಳ ರಾಜ್ಯದಲ್ಲೇ ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿರುವ ಕಂಬಳವೆಂದರೆ ಮಿಯ್ಯಾರಿನ ಲವಕುಶ ಕಂಬಳ. ಈ ಕಂಬಳ ಆಧುನಿಕ ಕಂಬಳಗಳಲ್ಲಿ ಅಗ್ರಗಣ್ಯವಾಗಿದ್ದು, ಅನೇಕ ದಾಖಲೆಗಳನ್ನು ತನ್ನ ಹೆಸರಿಗೆ ಬರೆದಿದೆ. ಸುಮಾರು 290 ಕ್ಕೂ ಹೆಚ್ಚು ಕಂಬಳ ಕೋಣಗಳು ಒಂದೇ ಕಂಬಳದಲ್ಲಿ ಭಾಗವಹಿಸಿದ್ದವು ಎಂಬ ದಾಖಲೆ ಇದೇ ಕಂಬಳದ ಹೆಮ್ಮೆ. ಸುಮಾರು11 ವರ್ಷಗಳ ಹಿಂದಿನ ಮಿಯ್ಯಾರು ಕಂಬಳದ ನೆನಪುಗಳು ಇಂದಿಗೂ ಜನರ ಮನದಲ್ಲಿ ತಾಜಾ. ಆ ವೇಳೆಯಲ್ಲಿ ಇಬ್ಬರು ಚಿಕ್ಕ ಮಕ್ಕಳು ಕಂಬಳ ಕರೆಯಲ್ಲಿ ಓಟಕ್ಕೆ ಇಳಿದಿದ್ದರು. ಅವರ ಹೃದಯದಲ್ಲಿ ಒಂದೇ ಕನಸು “ನಾವು ಕಂಬಳದ ಉಸೇನ್ ಬೋಲ್ಟ್ ಆಗಬೇಕು, ಕಂಬಳದ ಶ್ರೀನಿವಾಸ ಗೌಡನಂತೆ ವೇಗದ ದಾಖಲೆ ಬರೆಯಬೇಕು.” ಎಂಬುದು ಅವರಲ್ಲಿತ್ತು. ಕಂಬಳ ನೋಡುತ್ತಾ ಅದರ ಅರೈಕೆಯ ಮಾಡುವವರು, ಅವರು ಕೋಣಗಳ ನಿಜವಾದ ಗೆಳೆಯರು. ಕೋಣಗಳಿಗೆ ನೀರು ತರುವುದು, ಮೈಮೇಲೆ ನೀರು ಎರಚುವುದು, ಮಲಗಿದಾಗ ಅದರ ದೇಹಕ್ಕೆ ಮೈ ತುರಿಸುವುದು, ಇವೆಲ್ಲವೂ ಅವರ ಜೀವನದ ಭಾಗವಾಗಿದ್ದವು. ಅವರ ಬಾಲ್ಯದ ಆ ಸಣ್ಣಪುಟ್ಟ ಕ್ಷಣಗಳೇ ಮುಂದೆ ಕಂಬಳ ಸಂಸ್ಕೃತಿಯ ದೊಡ್ಡ ಪ್ರೇರಣೆಯಾಗಿದವು. ಕಂಬಳದ ಓಟ ಪ್ರಾರಂಭವಾದಾಗ ಬಾಲಕರಿಗೆ ಗದ್ದೆಗೆ ಇಳಿಯಲು ಅವಕಾಶ ಇರಲಿಲ್ಲ. ಯಾಕೆಂದರೆ ಕಂಬಳ ಕೋಣಗಳ ವೇಗ ಕ್ಷಣಗಳಲ್ಲಿ ಗೆಲುವು ನಿರ್ಧರಿಸುವಂಥದ್ದು. ಆದರೆ ಸ್ಪರ್ಧೆ ಮುಗಿದ ಬಳಿಕ ವಿಜೇತರಿಗೆ ಬಹುಮಾನ ವಿತರಣೆ ನಡೆಯುತ್ತಿದ್ದಾಗ, ಆ ಇಬ್ಬರು ಮಕ್ಕಳು ತಮ್ಮ ಯಜಮಾನರ ಹಾಗೂ ಆಯೋಜಕರ ಅನುಮತಿಯಿಂದ ಗದ್ದೆಗೆ ಇಳಿದರು. ಅದು ಅವರಿಗೊಂದು ಕನಸಿನ ಕ್ಷಣ ಮೊದಲ ಬಾರಿಗೆ ಕಂಬಳದ ಗದ್ದೆಯ ಮಣ್ಣನ್ನು ಪಾದಗಳಿಂದ ಅನುಭವಿಸಿದ ಸಂತೋಷ. ಅವರಲ್ಲಿತ್ತು ಶಾಲೆಯಿಂದ ವಾಪಸ್ಸಾದ ತಕ್ಷಣ ಹತ್ತಿರದ ಮನೆಯ ಕಂಬಳ ಕೋಣಗಳತ್ತ ಓಡಿ ಹೋಗುವುದು, ಅವುಗಳನ್ನು ಈಜುಕೊಳದಲ್ಲಿ ಸ್ನಾನ ಮಾಡಿಸುವುದು, ಆಹಾರ ನೀಡುವುದು ಈ ಎಲ್ಲವೂ ಅವರ ಪ್ರೀತಿಯ ಕಾಯಕ. ಕೋಣಗಳೊಂದಿಗೆ ಅವರು ಬೆಳೆಯುತ್ತಿದ್ದರೆಂದರೆ ತಪ್ಪಾಗದು. ಆದರೆ ಅದರ ಮಧ್ಯೆಯೂ ಓದನ್ನು ಕಡೆಗಣಿಸಲಿಲ್ಲ. ಇಬ್ಬರೂ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ತಮ್ಮ ಊರಿನಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದರು. ದ್ವಿತಿಯ ಪಿಯುಸಿ ಯಲ್ಲೂ ಇಬ್ಬರು ಅಗ್ರಗಣ್ಯರಾದರು, ಜೊತೆಗೆ ಇಬ್ಬರಿಗು ಸಾಪ್ಟ್ವೆರ್ ಇಂಜಿನಿಯರ್ ಆಗಿ ಕೆಲಸವು ದಕ್ಕಿತು ವರ್ಷಕ್ಕೆ 8 ಲಕ್ಷದ ಪ್ಯಾಕೆಜ್ ಒಂದೆ ಕಂಪೆನಿಯಲ್ಲಿ ಉದ್ಯೋಗ . ಆದರೆ ಶನಿವಾರ ರವಿವಾರ ಕಂಬಳ‌ನಡೆಯುವ ಕಾರಣ ಬೆಂಗಳೂರಿನಿಂದ ಬಸ್ ಹತ್ತಿ ಊರಿಗೆ ಬರುತಿದ್ದಾರೆ . ಖುಷಿಯಲ್ಲು ಉತ್ತಮ ಬಂಧವಿದೆ ಸಂಸ್ಕೃತಿಯ ಸೆಳೆತವಿದೆ. ದಿಗಂತ್ ಹಾಗು ರಾಕೇಶ್ ಈ‌ ಯುವಕರು ಈ ಸ್ಪೂರ್ತಿಯ ಸಾಧಕರು ಮಿಯ್ಯಾರು ಲವಕುಶ ಕಂಬಳ ಹಿಂದಿನ ಕಥೆ . ಕಷ್ಟಪಟ್ಟು ದುಡಿದರೆ ಸಾಧನೆ ಸಾಧ್ಯ, ಸಂಸ್ಕೃತಿಯನ್ನು ಕಾಪಾಡಿದರೆ ಗೌರವ ಶಾಶ್ವತ ಈ ಇಬ್ಬರು ವಿದ್ಯಾರ್ಥಿಗಳ ಕಥೆಯೇ ಅದಕ್ಕೆ ಜೀವಂತ ಸಾಕ್ಷಿ. ರಾಂ ಅಜೆಕಾರು ಕಾರ್ಕಳ http://ramajekar.travel.blog/2025/10/16/daily-stories-14/ #ಶುಭ ಗುರುವಾರ #ಶುಭ ಗುರುವಾರ #ಶುಭ ಗುರುವಾರ #KantaraKambala #TulunadSpirit #RishabShettyMagic #KantaraLegacy #TulunadCulture #KambalaChronicles #DivineKantara #SpiritOfTulunad #DaivaAndNature #RishabShettyVibes #KantaraReturns #TulunadPride #KambalaFever #RishabShettyUniverse #KantaraCulture #TulunadTradition #RuralRoyalty #DaivaBelaku #KantaraSaga #TulunadDaiva #RishabShettyRising #TulunadKambala #KantaraRoar #TulunadHeritage #DivineLegacy #KantaraGlory #TulunadCinema #KantaraRevolution #SpiritOfDaiva #RishabShettyKantara
💐ಗುರುವಾರದ ಶುಭಾಶಯಗಳು - ಲವ RAM AJEKAR O FFICIAL @ Ram Ajekar offiicial ಲವ RAM AJEKAR O FFICIAL @ Ram Ajekar offiicial - ShareChat
#💐ಬುಧವಾರದ ಶುಭಾಶಯ ಎಳೆ ಮಾವಿನ ಕಾಯಿಯ ಕಥೆ.., ಇನ್ನೂ ನಾಲ್ಕು ತಿಂಗಳು ಬಾಕಿಯಿದೆ ಚಳಿ ಬಂದರೆ ಹಣ್ಣುಗಳ ಋತುವಿಗೆ ರುಜು ಬರೆದಂತೆ, ಇಲ್ಲದಿದ್ದರೆ ಬರಗಾಲ ಹೆಚ್ಚು ಎಂಬುದು ಸ್ತಳಿಯರ ನಂಬಿಕೆ ಕಳೆದ ವರ್ಷ ಚಳಿ ಇರಲಿಲ್ಲ, ಆದ್ದರಿಂದ ಮಾವಿನ ರುತು ತಡವಾಗಿ ಆರಂಭವಾಗಿತ್ತು. ಕರಾವಳಿ ಪ್ರದೇಶದಲ್ಲಿ ಮಾವಿನಕಾಯಿ ಗೇರುಹಣ್ಣು ಹಣ್ಣು ಬೆಳೆಯಲು ಚಳಿ ಅತ್ಯಂತ ಮುಖ್ಯ. ಚಳಿ ಇಲ್ಲದಿದ್ದರೆ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಹಣ್ಣಿನ ಇಳುವರಿಯನ್ನೇ ಹಾಳುಮಾಡುತ್ತವೆ. ಹವಾಮಾನವೇ ಮಾವಿನ ಹಣ್ಣಿನ ಭಾಗ್ಯ ನಿರ್ಧರಿಸುತ್ತದೆ. ನಾನು ಶಾಲೆಯಲ್ಲಿದ್ದಾಗಿನ ದಿನಗಳು ನೆನಪಾಗುತ್ತವೆ . ಮಕ್ಕಳಿಗೆ ಎಳೆ ಮಾವಿನಕಾಯಿ ಕಿತ್ತು ಕೊಡುವ ಆ ಸಂತೋಷ! ಮನೆಯಲ್ಲಿ ನಿತ್ಯ ತೆಂಗಿನಕಾಯಿ, ಮೆಣಸು, ಸಾಸಿವೆ, ಬೆಳ್ಳುಳ್ಳಿ, ಉಪ್ಪು, ನೀರಿನಲ್ಲಿ ನುಣ್ಣಗೆ ರುಬ್ಬಿ ತಯಾರಿಸಿದ ಮಾವಿನಕಾಯಿ ಚಟ್ನಿ… ಅದಕ್ಕೆ ಜೊತೆಯಾಗಿ ಬಿಸಿ ಕುಚ್ಚಲಕ್ಕಿಯ ಗಂಜಿ ಅನ್ನ ಊಟಕ್ಕೆ ಸ್ವರ್ಗದ ಸುವಾಸನೆ ಇರುತ್ತಿತ್ತು. ಅವತ್ತು ಮರಕ್ಕೆ ಹತ್ತಿ ಮಾವಿನಕಾಯಿ ಕೀಳುವುದು ಸಾಹಸವಾಗಿತ್ತು. ರಸ್ತೆ ಬದಿಯಲ್ಲಿದ್ದ ಆ ಮರವಿಗೆ ವಾಹನಗಳ ಹೊಗೆ, ದೂಳು ತಗುಲುತ್ತಿದ್ದರೂ ಅದರ ಹೂಗಳಿಗೆ ಪರಾಗಸ್ಪರ್ಶ ಸುಲಭವಾಗುತ್ತಿತ್ತು. ಆ ಮರದಲ್ಲಿ ಕೆಂಪಿರುವೆಗಳು ಮನೆಮಾಡಿದ್ದವು; ಅವು ಕಚ್ಚಿದರೆ ದೇಹ ಬೆಂದಂತಾಗುತ್ತಿತ್ತು. ಕಾಲ ಬದಲಾಗಿದಂತೆ ಮರಕ್ಕೆ ಹತ್ತುವವರು ಕಡಿಮೆಯಾದರು, ಆದರೆ "ಕಲ್ಲು ಬಿಸಾಡುವ ಪರಿಣಿತರ" ತಂಡಗಳು ಹೆಚ್ಚಾದವು. ಮರಕ್ಕೆ ಕಲ್ಲುಗಳ ಗಾಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಯಿತು. ಎಷ್ಟೇ ಆಗಲಿ, ಕಲುಪ್ಪು ಜೊತೆ ಎಳೆ ಮಾವಿನಕಾಯಿ ತಿನ್ನುವ ಚಂದ ಬೇರೆ ಅದೊಂದು ವಿಶಿಷ್ಟ ರುಚಿ ,ಮರಕ್ಕೆ ಕಲ್ಲು ಬಿಸಾಡಿ ಮಾವಿನಕಾಯಿ ತಿಂದರೂ, ಆ ರಸಾಸ್ವಾದದ ಆನಂದ ಅಷ್ಟೇ ವಿಭಿನ್ನ. ಮನೆಯ ಯಜಮಾನ ತೆಂಗಿನ ಕಾಯಿ ಕಳ್ಳತನದ ಬಗ್ಗೆ ಭಾರಿ ಚಿಂತಕ್ರಾಂತ ನಾಗಿದ್ದ, ಮಾವಿನ ಕಾಯಿ ಯಾರು ಬೆಕಾದರು ತೆಗೆಯಿರಿ ಎಂದು ಎಲ್ಲರಿಗು ಹೇಳುತಿದ್ದ, ಯಾಕೆಂದರೆ ಹಳ್ಳಿಗರ ಮನಸ್ಸು ದಾನದಲ್ಲಿ ಶೂರರು ಅಲ್ವೆ. ಅದರಲ್ಲಿ ಮೋಸವಿಲ್ಲ. ಮಕ್ಕಳಾಟಿಕೆ ಅಲ್ವಾ ಎಂದು ಕಲ್ಳು ಬಿಸಾಡುವವರನ್ನು ಪ್ರೋತ್ಸಾಹಿಸುತಿದ್ದರು, ಕೆಲವೊಮ್ಮೆ ಯಜಮಾನನೆ ದೋಟಿಯಲ್ಲಿ ಎಳೆ ಮಾವಿನ ಕಾಯಿಯನ್ನು ಕಿತ್ತುಕೊಡುವ ಕಾರ್ಯ ಮಾಡುತಿದ್ದರು. ಒಮ್ಮೆ ಒಂದು ವಿಚಿತ್ರ ಘಟನೆ. ತೋಟದ ದೂರದಲ್ಲಿ ಕೆಲವು ಮಂದಿ ಮಾವಿನಕಾಯಿ ಕೀಳಲು ಕಲ್ಲು ಬಿಸಾಡುತ್ತಿದ್ದರು. ಅದೇ ವೇಳೆಯಲ್ಲಿ ತೋಟದೊಳಗೆ ತೆಂಗಿನಕಾಯಿ ಕದಿಯಲು ಬಂದಿದ್ದ ಯುವಕನ ಮೇಲೆ ಒಂದು ಕಲ್ಲು ಬಿದ್ದು ಗಾಯವಾಯಿತು. ಆತ ನೋವಿನಿಂದ ಬೊಬ್ಬೆ ಹಾಕಿದ. ಜನ ಓಡಿ ಬಂದು ಹಿಡಿದರು. ಬಹುಕಾಲದಿಂದ ತೆಂಗಿನಕಾಯಿ ಕಳೆದು ಹೋಗುತ್ತಿದ್ದ ಸುಳಿವು ಕೊನೆಗೂ ಸಿಕ್ಕಿತು. ಯಾರು ಕದಿಯುತ್ತಿದ್ದರು ಎಂಬುದು ಗೊತ್ತಾಗದಿದ್ದರೂ, ಆ ದಿನ ಬಿದ್ದ ಒಂದೇ ಕಲ್ಲು ಎಲ್ಲವನ್ನೂ ಬಿಚ್ಚಿಟ್ಟಿತು ಕಲ್ಲು ಬಿಸಾಡಿದವರ ಕಲೆ, ಕಳ್ಳನ ಕಥೆಯಾಗಿ ಬದಲಾಗಿದೆ. ಹೀಗೆ, ಮಾವಿನಕಾಯಿ ಕಥೆ ಕೊನೆಗೆ ತೆಂಗಿನಕಾಯಿ ಕಳ್ಳನ ಸಿಕ್ಕಿಬೀಳುವ ಕಥೆಯಾಯ್ತು ಪ್ರಕೃತಿಯ ಆಟವೋ, ಪಾಪದ ಫಲವೋ, ಯಾರಿಗೂ ಅರ್ಥವಾಗಲಿಲ್ಲ.. ರಾಂ ಅಜೆಕಾರು ಕಾರ್ಕಳ #ಹಳ್ಳಿಕಥೆ #ತುಳುನಾಡು #ಕಂಬಳ #ತುಳುಸಂಸ್ಕೃತಿ #ತುಳುನಾಡಿನಜಾನಪದ #ಬೋವೀಕೆಂಬಳ #ಭೂತಕೋಲ #ತುಳುನಾಡಿನಸಿರಿನೋಟ #rurallife #karkalaudupi #ಬುಧವಾರ ಶುಭಾಶಯಗಳು #💐ಬುಧವಾರ ಶುಭಾಶಯಗಳು #ಶುಭ ಬುಧವಾರ 💐 #ಶುಭ ಬುಧವಾರ
💐ಬುಧವಾರದ ಶುಭಾಶಯ - Ram Ajekar official Ram Ajekar official - ShareChat
#💐ಮಂಗಳವಾರದ ಶುಭಾಶಯಗಳು ತುಳುನಾಡಿನ ಸಂಸ್ಕೃತಿಯ ವೈಶಿಷ್ಟ್ಯ ... ತುಳುನಾಡಿನ ಸಂಸ್ಕೃತಿಯ ವಿಶೇಷತೆ ಎಂದರೆ ಅಕ್ಟೋಬರ್ ಅಂತ್ಯದಿಂದ ಮೇ ಮೊದಲ ವಾರದವರೆಗೆ ನಡೆಯುವ ಕಂಬಳ ಮತ್ತು ಕೋಲಗಳ ಋತು. ಈ ಅವಧಿಯಲ್ಲಿ ಗ್ರಾಮಗಳ ಗರಡಿಗಳಲ್ಲಿ ವಾರ್ಷಿಕ ಕೋಲ ಮತ್ತು ಜಾತ್ರೆಗಳು ಜೋರಾಗಿ ನಡೆಯುತ್ತವೆ. ಈ ಸಂದರ್ಭಕ್ಕೆ ಮುಂಬಯಿ, ಗೋವಾ ಅಥವಾ ಬೇರೆ ಊರುಗಳಲ್ಲಿ ವಾಸಿಸುತ್ತಿರುವ ತುಳುನಾಡಿನ ಜನರು ತಮ್ಮ ಮೂಲ ಗ್ರಾಮಗಳಿಗೆ ಬಂದು ಭಾಗವಹಿಸುತ್ತಾರೆ. ವಿಶೇಷವಾಗಿ ಮದುವೆಯಾಗಿ ಹಳ್ಳಿಯ ಹೊರಗೆ ಹೋದ ಮದುಮಕ್ಕಳು ಕೋಲಕ್ಕೆ ಬರಬೇಕು ಎನ್ನುವ ಪುರಾತನ ವಾಡಿಕೆ ಇಂದಿಗೂ ಜೀವಂತವಾಗಿದೆ. ಹಳೆಯ ಮನೆಗಳಲ್ಲಿ ಹೊಸ ಬಟ್ಟೆ ತೊಟ್ಟು ಜಾತ್ರೆಗೆ ಬರುವ ಸಂಪ್ರದಾಯದ ಚಂದ ಇಂದಿಗೂ ಮಾಸಿಲ್ಲ. ಪ್ರತಿಯೊಂದು ಗರಡಿಯ ಕೋಲ ಮುಗಿದ ನಂತರ ಕೋಳಿ ಅಂಕಗಳು ನಡೆಯುವುದು ಸಹ ಸಾಮಾನ್ಯ. ಕೆಲವು ಕಡೆಗಳಲ್ಲಿ ಇವು ನಾಮಕಾವಸ್ಥೆಯಂತೆ ನಡೆಯುತ್ತವೆ. ಸರ್ಕಾರ ಕೋಳಿ ಅಂಕ (ಜೂಜು)ಗಳನ್ನು ನಿಷೇಧಿಸಿದ್ದರೂ, ಕೆಲವು ಪ್ರದೇಶಗಳಲ್ಲಿ ಇನ್ನೂ ಗುಪ್ತವಾಗಿ ಹಳ್ಳಿಯೊಳಗೆ ಅಥವಾ ಕಾಡಂಚಿನ ಜಾಗಗಳಲ್ಲಿ ಇಂತಹ ಆಟಗಳು ನಡೆಯುತ್ತಲೇ ಇರುತ್ತವೆ. ಒಮ್ಮೆ ಇಂತಹ ಒಂದು ಘಟನೆ ತುಳುನಾಡಿನ ಹಳ್ಳಿಯೊಂದರಲ್ಲಿ ನಡೆಯಿತು. ಅಂದು ಎರಡು ರಾಜಕೀಯ ಪಕ್ಷಗಳ ನಡುವೆ ಜಂಗಿ ಕುಸ್ತಿ ನಡೆಯುತ್ತಿತ್ತು. ಸ್ಥಳೀಯ ಆಡಳಿತ ಪಕ್ಷದ ಒಬ್ಬ ನಾಯಕ ಕೋಳಿ ಅಂಕವನ್ನು ನಡೆಸಿದ್ದ. ಆದರೆ ವಿರೋಧ ಪಕ್ಷದ ಯುವಕನೊಬ್ಬ ಆ ಕೋಳಿ ಅಂಕದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಲೈವ್ ಮಾಡಿ ಹಂಚಿಕೊಂಡ. ಆ ವೀಡಿಯೋ ಇಲಾಖಾ ಅಧಿಕಾರಿಗಳ ಕಣ್ಣಿಗೆ ಬಿದ್ದ ತಕ್ಷಣ ಅವರು ಸ್ಥಳಕ್ಕೆ ಧಾವಿಸಿದರು. ಪೋಲೀಸರು ಬಂದು ಕೋಳಿ ಅಂಕವನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು. ಆ ಸಮಯದಲ್ಲಿ ಬಾಜಿ ಕಟ್ಟಿದ್ದ ಜನರು ದಿಕ್ಕುಪಾಲಾಗಿ ಓಡಿಹೋದರು. ಯಾರು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ವಿಚಾರಿಸಿದಾಗ ಯಾರೂ ಬಾಯಿಬಿಟ್ಟಿರಲಿಲ್ಲ. ಆದರೆ ನಂತರ ಸಾಮಾಜಿಕ ಜಾಲತಾಣದ ಲೈವ್ ಮೂಲಕ ಎಲ್ಲಾ ಗೊತ್ತಾಯಿತು. ಪರಿಶೀಲನೆ ನಡೆಸಿದಾಗ, ಆ ವೀಡಿಯೋ ಹಾಕಿದ ಯುವಕನೇ ಕೋಳಿ ಅಂಕದಲ್ಲಿ ಸೋತು ಹಣ ಕಳೆದುಕೊಂಡಿದ್ದಾನೆಂಬುದು ಬಹಿರಂಗವಾಯಿತು. ಆತನೇ ಆಡಳಿತ ಪಕ್ಷದ ಸದಸ್ಯನಾಗಿದ್ದರಿಂದ ಈ ವಿಷಯಕ್ಕೆ ರಾಜಕೀಯ ಬಣ್ಣ ತಗುಲಿತು. ಅಂತಿಮವಾಗಿ ಪೋಲೀಸರು ಕೋಳಿಯನ್ನೂ, ಅಂಕದ ಆಯೋಜಕರನ್ನೂ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದರು. ಕೋಳಿ ಅಂಕವನ್ನು ನಿಲ್ಲಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾದರು. ಸಂಸ್ಕೃತಿಯ ಉತ್ಸವಗಳು ಅಗತ್ಯ, ಆದರೆ ಜೂಜಾಟಗಳು ತಪ್ಪು. ಸಂಸ್ಕೃತಿಯನ್ನು ಕಾಪಾಡುವುದು ನಮ್ಮ ಕರ್ತವ್ಯ, ಹಾಸ್ಯದ ಮಾತು ಏನೆಂದರೆ ಕೋಳಿ ಅಂಕ ನಿಲ್ಲಿಸಲು ಓಡಿಬಂದ ಕೆಲವು ಇಲಾಖಾ ಅಧಿಕಾರಿಗಳ ಮನೆಗಳಲ್ಲಿ ಅಲ್ಲಿಯ ನಾಟಿ ಕೋಳಿಯು ಬಣಲೆಯಲ್ಲಿ ಬೇಯುತ್ತಿತ್ತು . ರಾಂ ಅಜೆಕಾರು ಕಾರ್ಕಳ http://ramajekar.travel.blog/2025/10/14/daily-stories-13/ #ಮಂಗಳವಾರ #ರಾಜಕಾರಣಿಗಳು ಮತ್ತು ಅಧಿಕಾರಿ ವರ್ಗದವರಿಗೆ ಉನ್ನತ ಸ್ಥಾನ ಭಾಗ್ಯ - ಮಂಗಳವಾರ ರಾಶಿ ಭವಿಷ್ಯ -ಜನವರಿ-9,2024 #ಶುಭ ಮಂಗಳವಾರ #ಶುಭ ಮಂಗಳವಾರ
💐ಮಂಗಳವಾರದ ಶುಭಾಶಯಗಳು - Ram Ajekar official Ram Ajekar official - ShareChat
#😭ಖ್ಯಾತ ಹಿರಿಯ ಹಾಸ್ಯ ನಟ ಇನ್ನಿಲ್ಲ💔 #ರಾಜು ತಾಳಿಕೋಟೆ #ಧಾರವಾಡ ರಂಗಾಯಣಕ್ಕೆ “ರಾಜು ತಾಳಿಕೋಟೆ” ನೂತನ ನಿರ್ದೇಶಕ! #ತಾಳಿಕೋಟೆ ಸ್ವಾಮಿಗಳ ಪ್ರವಚನ #ತಾಳಿಕೋಟೆ
😭ಖ್ಯಾತ ಹಿರಿಯ ಹಾಸ್ಯ ನಟ ಇನ್ನಿಲ್ಲ💔 - ShareChat
01:21
ನನ್ನ ಕಥೆ ನನ್ನ ಶ್ರೇಷ್ಠತೆಯೆಂತು ನನಗೆ ತಿಳಿದಿಲ್ಲ, ಸೂರ್ಯೋದಯದೊಡನೆ ಜೇಸಿಬಿಯ ಗರ್ಜನೆ ಕಿವಿಗೆ ಬಡಿದಾಗ, ನನ್ನ ಹೃದಯದ ಭೂಮಿ ಕಂಪಿಸಿತು. ಏನು ಮಾಡಲಿ ,ನನ್ನನ್ನು ಕಿತ್ತು, ಮಣ್ಣಿನಡಿ ಹಾಕಿ, ಗೊಬ್ಬರ ಮಾಡಿಬಿಟ್ಟರು ಮನುಜರು. ನನ್ನ ಕುಟುಂಬಗಳು ಕುಸಿಯುತ್ತಿವೆ ನಗರಗಳಲ್ಲಿ ನಾನು ಕಾಣೆಯಾದೆ, ಹಳ್ಳಿಗಳಲ್ಲೂ ನನ್ನ ನೆನಪು ಮಾತ್ರ ಉಳಿದಿದೆ. ಕಾಡುಗಳನ್ನು ಕಿತ್ತು, ಗುಡ್ಡಗಳನ್ನು ತೆಗೆದು ಅದೆಯ ಜಾಗದಲ್ಲಿ ಮನೆ, ತೋಟ, ರಬ್ಬರ್ ತೋಟ, ಅಡಿಕೆ ತೋಟಮಾಡಿಬಿಟ್ಟರು, ಅಲ್ಲಿ ನಾನು ಗೊಬ್ಬರವಾಗಿದ್ದೆ. ಒಮ್ಮೆ ಮೇಧಾವಿ ಮನುಜನೊಬ್ಬ ಊರಿಗೆ ಹೇಳಿದ್ದ ದೈವರಾಧನೆಗೆ ಕೇಪುಳ ಹೂ ಬೇಕಂತೆ, ಅದರಲ್ಲೂ ಗುಳಿಗ ಮತ್ತು ಪಂಜುರ್ಲಿ ದೈವಗಳಿಗೆ ಅದು ಪವಿತ್ರ ಎಂದಂತೆ. ಆದರೆ ಊರು ಸುತ್ತಿ ಹುಡುಕಿದರೂ ಸಿಕ್ಕಿಲ್ಲ. ಒಬ್ಬ ಗರ್ಭಿಣಿಗೆ ಮಗುವಿನ ಆರೋಗ್ಯಕ್ಕಾಗಿ ಆಯುರ್ವೇದ ಪಂಡಿತರು ಕೇಪುಳ ಬೇರಿನ ಕಷಾಯ ನೀಡಬೇಕೆಂದರು. ಜ್ವರ ಕಾಡಿದಾಗ ಜನರು ನನ್ನ ಬೇರುಗಳಿಂದ ಕಷಾಯ ಮಾಡಿ ಕುಡಿದರು “ರೋಗನಿರೋಧಕ ಶಕ್ತಿ ಹೆಚ್ಚುತ್ತದೆ” ಎಂದರು. ಆ ಪಂಡಿತನೇ ನನ್ನ ಉಳಿವಿಗೋಸ್ಕರ ತನ್ನ ಮನೆಗೆ ಹೋಗಿ ಒಂದು ಗಿಡ ನೆಟ್ಟನು ಪುನರ್ಜನ್ಮ ನೀಡಿದಂತಾಗಿತ್ತು.. ಕಾಡಿನ ರಸ್ತೆಯ ಬದಿಯಲ್ಲಿ ಬೆಳೆದಾಗ, ನನ್ನ ಕಾಯಿಗಳನ್ನು ಮಂಗಗಳು, ಪಕ್ಷಿಗಳು, ಮಕ್ಕಳು ತಿನ್ನುತ್ತಿದ್ದರು. ಆ ನೋಟ ನನಗೆ ಸಂತೋಷವಾಗಿತ್ತು. ಆದರೆ ಇಂದು ಕಿತ್ತು ಬಿಸಾಡುವವರ ಕೈಯಲ್ಲಿ ನನ್ನ ಮನಸ್ಸು ನೋವಿನಿಂದ ಕಹಿಯಾಗುತ್ತದೆ. ಆ ಪಂಡಿತರು ನನ್ನಿಂದ ಹಣ ಮಾಡಿದರು, ಆದರೆ ಅದರಲ್ಲಿ ನನ್ನ ಉಳಿವಿದೆ ಎಂದು ನಾನು ಸಮಾಧಾನಪಡುತ್ತೇನೆ. ದೈವಗಳ ಆರಾಧನೆಗೆ ಇಂದು ಹೈಬ್ರಿಡ್ ಬಾಂಬೆ ಕೇಪುಳ ಹೂ ಕಾಲಿಟ್ಟಿದೆ ಆದರೆ ನಾನು? ನೋವಿನಿಂದ ಕೂಡಿದರೂ,ಕೂಡ ಸೌಂದರ್ಯದಿಂದ ಬದುಕುತ್ತಿರುವೆ.ಅದರೆ ಕೆಲವು ದಿನಗಳಿಗೆ ಮಾತ್ರ,ಅವರವರ ಭಾವಕ್ಕೆ ಅವರವರ ಭಕ್ತಿ ಎಂದು ಸುಮ್ಮನೆ ಕೂರಬೇಕಷ್ಟೆ ರಾಂ ಅಜೆಕಾರು ಕಾರ್ಕಳ http://ramajekar.travel.blog/2025/10/13/daily-stories-12/ #ಸೋಮವಾರ #ಶುಭೋದಯ ಶುಭ ಸೋಮವಾರ #ಶುಭ ಸೋಮವಾರ #ಶುಭನುಡಿ 🌹 ಶುಭದಿನ #ಶುಭನುಡಿ #Kantara #KantaraSpirit #KantaraLegend #KantaraMovie #KantaraCulture #KantaraDivine #KantaraVibes #KantaraRishabShetty #KantaraLegacy #KantaraFestival #KantaraDaiva #KantaraMagic #KantaraPride #KantaraRevolution #KantaraSensation
ಸೋಮವಾರ - Ram Ajekar official Ram Ajekar official - ShareChat
Read my thoughts on YourQuote app at https://www.yourquote.in/ram-ajekar-d2xl/quotes/akaankssey-mnssu-khussigaagi-hnblisittu-adre-vaastvte-bnnnn-cxjbhr #ಶುಭನುಡಿ #ಶುಭನುಡಿ #ಶುಭನುಡಿ #ಭಾನುವಾರ ಶುಭನುಡಿ #ಶುಭನುಡಿ 🌹 ಶುಭದಿನ
ಶುಭನುಡಿ - ಮನಸ್ಸು ಅಕಾಂಕ್ಷೆಯ ಖುಷಿಗಾಗಿ ಹಂಬಲಿಸಿತ್ತು , ಆಗಿತ್ತು . ಅದರೆ ವಾಸ್ತವತೆ ಬೆರೆಯೇ రెనెసుగెళ బణ్ణ పజ్బిదె వుటగెళు; ತೊಯ್ದು ' ಹೋದವು: Ram Ajekar Your uote.in ಮನಸ್ಸು ಅಕಾಂಕ್ಷೆಯ ಖುಷಿಗಾಗಿ ಹಂಬಲಿಸಿತ್ತು , ಆಗಿತ್ತು . ಅದರೆ ವಾಸ್ತವತೆ ಬೆರೆಯೇ రెనెసుగెళ బణ్ణ పజ్బిదె వుటగెళు; ತೊಯ್ದು ' ಹೋದವು: Ram Ajekar Your uote.in - ShareChat
#🕺ಭಾನುವಾರದ ಶುಭಾಶಯಗಳು ಕಬಿನಿಯ ನೆನಪು ಭಾರಿ ಬಿಸಿಲು ಉರಿಯುತ್ತಿತ್ತು ತಾಳಲಾಗದಷ್ಟು, ಮಾವುತ ನನ್ನನ್ನು ಕರೆದುಕೊಂಡು ಹೋದ. ಸಣ್ಣ ನೀರಿನ ಟ್ಯಾಂಕ್‌ ಹತ್ತಿರ ಸ್ವಲ್ಪ ಸ್ವಲ್ಪ ನೀರನ್ನು ಮೈಮೇಲೆ ಎರಚಿ, ಮೈ ತಿಕ್ಕಿ ಸ್ನಾನ ಮಾಡಿಸುತ್ತಿದ್ದ. ಅಲ್ಲೇ ಹತ್ತಿರ ಆಟವಾಡುತ್ತಿದ್ದ ಮಕ್ಕಳು ನಕ್ಕು, “ಗಜಸ್ನಾನ ಅಂತಾರೆ ಇದು!” ಎಂದು ಹೇಳಿಕೊಂಡರು. ಅವರಿಗೆ ನನ್ನ ಪರಿಸ್ಥಿತಿ ಎಲ್ಲಿ ಗೊತ್ತು? ಇಂದಿನ ಮಕ್ಕಳಿಗೆ ಆಧುನಿಕತೆ ಗೊತ್ತು, ಆದರೆ ಹಳೆಯ ಜೀವನದ ನೆಲೆನಿಯಮ, ಕಾಡಿನ ಸಂಸ್ಕೃತಿ ಗೊತ್ತಿಲ್ಲ. ಕಾಡಿನಿಂದ ಖೆಡ್ಡಕ್ಕೆ ಕೆಡವಿ ಹಿಡಿದಾಗ ಪಟ್ಟ ನೋವು ಅಷ್ಟಿಷ್ಟಲ್ಲ... ನಾನು ಕಳೆದ ಇಪ್ಪತ್ತೈದು ವರ್ಷಗಳಿಂದ ಕಾಡಿನಲ್ಲೇ ಸಂಚರಿಸುತ್ತಿದ್ದೆ. ಕಬಿನಿಯ ಹಿನ್ನೀರಿನಲ್ಲಿ ಪ್ರತಿದಿನ ಸೊಂಡಿಲಲ್ಲಿ ನೀರು ಎತ್ತಿ ಸ್ನಾನ ಮಾಡುತ್ತಿದ್ದೆ. ಕೆಸರಿನಲ್ಲಿ ಮಲಗಿ, ಎದೆತಟ್ಟಿನ ಮಣ್ಣಿನ ವಾಸನೆ ಉಸಿರಾಡುತ್ತಿದ್ದೆ. ಆನಂದದ ಆ ಕ್ಷಣಗಳು… ಎಂದಿಗೂ ಮರೆಯಲಾಗದವು. ಹಸಿದಾಗ ಈಂದು ಮರವನ್ನು ದೂಡಿ ಹಾಕಿ ಅದರ ಕಾಂಡದಿಂದ ಹಿಡು ತಲೆಭಾಗವರೆಗು ತಿನ್ನುತಿದ್ದೆ, ಹತ್ತಿರದ ಮರದಿಂದ ಹಲಸನ್ನು ದೂಡಿ ತಿನ್ನುತ್ತಿದ್ದೆ. ಅದು ಹಬ್ಬದ ದಿನ ಅದೇ ನನ್ನ ನಿತ್ಯದ ಬದುಕು ಕಾಡಿನಲ್ಲಿನ ಸ್ವಾತಂತ್ರ್ಯ, ಆದರೆ ಕಾಡು ನಿಧಾನವಾಗಿ ಕಡಿಮೆಯಾಯಿತು. ನಮ್ಮ ಊಟವಿಲ್ಲದಾಯಿತು. ಮನುಷ್ಯ “ಸಫಾರಿ” ಎನ್ನುವ ಹೊಸ ಆಟ ಶುರು ಮಾಡಿದ. ನಮ್ಮ ಪ್ರದೇಶ, ನಮ್ಮ ಮನೆ ಅವರ ಪ್ರದರ್ಶನದ ವೆದಿಕೆಯಂತಾಯಿತು. ಸ್ವಾತಂತ್ರ್ಯಕ್ಕೆ ಧಕ್ಕೆಯಾದಾಗ ನಾವು ಕಾಡಿನಿಂದ ಹೊರ ಬರಲೇಬೇಕಾಯಿತು. ಒಮ್ಮೆ ನನ್ನ ಗೆಳೆಯನನ್ನು ಯಾರೋ ದಂತಕ್ಕಾಗಿ ಹಿಡಿಯಲು ಬಂದರು. ನಾನು ಅವನನ್ನು ರಕ್ಷಿಸಲು ಬಿದ್ದೆ, ಪ್ರತಿಭಟಿಸಿದೆ. ಆದರೆ ಅವರು ದೂರದಿಂದ ಗುಂಡು ಹೊಡೆದು ಅವನನ್ನು ಬೇಟೆಯಾಡಿದರು. ನಾನು ಕೋಪದಿಂದ ಆ ಬೇಟೆಗಾರನನ್ನೇ ಅಟ್ಟಿಕೊಂಡು ಹೋದೆ ಕೊನೆಗೆ ಅವನನ್ನೇ ಬೇಟೆಯಾಡಿದೆ. ಆದರೆ ಆತನ ಸಾವಿನಿಂದ ನನಗೆ ದೊರೆತದ್ದು ಸ್ವಾತಂತ್ರ್ಯವಲ್ಲ ಖೆಡ್ಡದ ಜೀವನ. ಸ್ಥಳೀಯರು, ಅಧಿಕಾರಿಗಳು “ಮನುಜನ ಬಲಿ” ಎಂದು ನನ್ನ ವಿರುದ್ಧ ನಿಂತರು. ಆದರೆ ನಾನು ಮಾಡಿದ್ದೇ ನ್ಯಾಯ. ನನ್ನ ಗೆಳೆಯನ ಜೀವದ ಬದಲಿಗೆ ನಾನು ಜೀವ ತೆಗೆದುಕೊಂಡೆ ಪ್ರಾಣಿಯ ರೀತಿಯಲ್ಲಿ, ಕಾಡಿನ ನಿಯಮದಂತೆ.ಈಗ ನಾನು ಪಳಗಿದವನು ಆದರೆ ಕಾಡಿನ ನೆನಪು, ಕಬಿನಿಯ ನೀರಿನ ತಂಪು, ಗಾಳಿಯ ಸುವಾಸನೆ ಇವೆಲ್ಲ ನನ್ನ ಮನದೊಳಗೆ ಬಿಕ್ಕಿ ನಿಂತಿವೆ. ಇಲ್ಲಿ ಕೇವಲ ಪೈಪ್ ನೀರು, ಕಬ್ಬಿಣದ ಸರಪಣಿ, ಕಾಲಿಗೆ ಕುತ್ತಿಗೆಗೆ ಬಿಗಿದ ಬಿಗುಪಟ್ಟು. ನೋವು ಉರಿಯುತ್ತದೆ ಆದರೆ ಅದನ್ನು ಯಾರಿಗೆ ಹೇಳಲಿ ಇದು ನನ್ನ ನಿತ್ಯದ ಮೌನ ರೋಧನ, -ರಾಂ ಅಜೆಕಾರು ಕಾರ್ಕಳ http://ramajekar.travel.blog/2025/10/12/dailystories-7/ ##ಮೈಲಾರ ಕಾರ್ಣಿಕ #🌹ಏಳು ಕೋಟಿ ಮೈಲಾರ ಲಿಂಗೇಶ್ವರ🌹🙏🙏🙏🌹 #🔱ಮೈಲಾರ ಲಿಂಗೇಶ್ವರ 🙏 #ಶ್ರೀ ಮೈಲಾರ ಲಿಂಗೇಶ್ವರ🙏🙏 #ElephantWhispers #MysoreZooDiaries #KabiniWildlife #GentleGiants #WildKabini #MysoreMagic #TuskerTrails #JungleVibes #KabiniChronicles #MajesticElephants #NatureInMysore #SafariDreams #WildSoulIndia #KabiniEscape #MysoreAdventures
🕺ಭಾನುವಾರದ ಶುಭಾಶಯಗಳು - BaAjelrffua BaAjelrffua - ShareChat