ShareChat
click to see wallet page

#😭ಖ್ಯಾತ ಗಾಯಕ ಅಂತಿಮ ಯಾತ್ರೆ ಲಿಮ್ಕಾ ದಾಖಲೆಗೆ ಸೇರ್ಪಡೆ💔 ಅಸ್ಸಾಂದ ಪ್ರಸಿದ್ಧ ಗಾಯಕ ಜುಬೀನ್ ಗಾರ್ಗ್ ಅವರ ಅಂತಿಮ ಯಾತ್ರೆ ಸೆಪ್ಟೆಂಬರ್ 21ರಂದು ಗುವಾಹಟಿಯಲ್ಲಿ ನೆರವೇರಿತು. ಈ ವೇಳೆ ಲಕ್ಷಾಂತರ ಮಂದಿ ಭಾಗವಹಿಸಿದ್ದರು. ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಪ್ರಕಾರ, ಇದು ವಿಶ್ವದಲ್ಲೇ 4ನೇ ಅತಿದೊಡ್ಡ ಅಂತಿಮ ಯಾತ್ರೆ ಆಗಿ ದಾಖಲಾಗಿದ್ದು, ಮೈಕೆಲ್ ಜಾಕ್ಸನ್, ಪೋಪ್ ಫ್ರಾನ್ಸಿಸ್, ರಾಜಕುಮಾರಿ ಡಯಾನಾ ಹಾಗೂ ರಾಣಿ ಎಲಿಜಬೆತ್ ಅವರಿಗೆ ನೀಡಿದ ವಿದಾಯದ ನಂತರದ ಸ್ಥಾನ ಪಡೆದಿದೆ.ಎಲ್ಲಿ ನೋಡಿದರೂ ಜನಸಾಗರವೇ ಗುವಾಹಟಿಯಲ್ಲಿ ಕಂಡುಬಂತು. ಸೆ.19ರಂದು ಸಿಂಗಾಪುರದಲ್ಲಿ ಮೃತಪಟ್ಟಿದ್ದ ಜುಬೀನ್‌ ಅವರ ಮೃತದೇಹವನ್ನು ಭಾನುವಾರ ಅಸ್ಸಾಂಗೆ ಕರೆ ತರಲಾಯಿತು. ಈ ವೇಳೆ ವಿಮಾನ ನಿಲ್ದಾಣದಿಂದ ಅವರ ನಿವಾಸದ ತನಕ ಸುಮಾರು 25 ಕಿ.ಮೀ ಮೆರವಣಿಗೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಲಕ್ಷಾಂತರ ಅಭಿಮಾನಿಗಳು ಅಂತಿಮ ದರ್ಶನ ಪಡೆದರು #📰ಇಂದಿನ ಅಪ್ಡೇಟ್ಸ್ 📲 #😞 ಮೂಡ್ ಆಫ್ ಸ್ಟೇಟಸ್ #🆕ಲೇಟೆಸ್ಟ್ ಅಪ್ಡೇಟ್ಸ್ 📰

9.4K ವೀಕ್ಷಿಸಿದ್ದಾರೆ
20 ದಿನಗಳ ಹಿಂದೆ