Edu ವೀರ
ShareChat
click to see wallet page
@edu_veera
edu_veera
Edu ವೀರ
@edu_veera
Edu ವೀರ
Pooja Hegde Marriage: ಇತ್ತೀಚೆಗೆ ಬಾಲಿವುಡ್ ನಟಿಯೊಬ್ಬರ ಮದುವೆಯ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ. ಹೃತಿಕ್ ರೋಷನ್ ಜೊತೆ ತಮ್ಮ ಸಿನಿಮಾ ವೃತ್ತಿಜೀವನ ಆರಂಭಿಸಿದ ಪೂಜಾ ಹೆಗ್ಡೆ, ಕ್ರಿಕೆಟಿಗನೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್‌ ಆಗುತ್ತಿದೆ.. ಇದಕ್ಕೆ ಅವರೇ ಪ್ರತಿಕ್ರಿಯೆ ನೀಡಿದ್ದಾರೆ..  ಮೊಹೆಂಜೊ ದಾರೋ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಪೂಜಾ ಹೆಗ್ಡೆ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಅವರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬುದು ಚಿತ್ರರಂಗದಲ್ಲಿ ಹರಿದಾಡುತ್ತಿರುವ ಸುದ್ದಿ. ಪೂಜಾ ಮುಂಬೈನಲ್ಲಿ ವಾಸಿಸುವ ಕ್ರಿಕೆಟಿಗನನ್ನು ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.  ಆದರೆ, ಈಗ ನಟಿ ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪೂಜಾ ಹೆಸರು ಕ್ರಿಕೆಟಿಗರೊಂದಿಗೆ ತಳುಕು ಹಾಕಿಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆ, ನಟಿ ಕರ್ನಾಟಕದ ಕ್ರಿಕೆಟಿಗನನ್ನು ಮದುವೆಯಾಗಲಿದ್ದಾರೆ ಮತ್ತು ಅವರು ತಮ್ಮ ಸಹೋದರನ ಮದುವೆಯಲ್ಲೂ ಭಾಗವಹಿಸಿದ್ದರು ಎಂಬ ವರದಿಗಳು ಬಂದಿದ್ದವು.ಆದರೆ ನಟಿ ಪೂಜಾ ವದಂತಿಗಳನ್ನು ನಿರಾಕರಿಸಿದ್ದು, "ನನ್ನ ಸಂಪೂರ್ಣ ಗಮನ ನನ್ನ ಕೆಲಸದ ಮೇಲೆ ಮಾತ್ರ ಮತ್ತು ನಾನು ಒಂಟಿಯಾಗಿದ್ದೇನೆ.. ನನ್ನ ಮದುವೆಯ ಬಗ್ಗೆ ನಾನು ಸುದ್ದಿ ಓದಿದ್ದೇನೆ, ಆದರೆ ನಾನು ಅದರ ಬಗ್ಗೆ ಗಮನ ಹರಿಸುವುದಿಲ್ಲ" ಎಂದು ನಟಿ ಸ್ಪಷ್ಟವಾಗಿ ಹೇಳಿದ್ದಾರೆ.. ನಿರ್ದೇಶಕ ಫರ್ಹಾದ್ ಸಾಮ್ಜಿ ಅವರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದಲ್ಲಿ ಪೂಜಾ ಕೊನೆಯದಾಗಿ ಕಾಣಿಸಿಕೊಂಡಿದ್ದರು. #😍ಹಸೆಮಣೆ ಏರಲು ಸಜ್ಜಾದ ಖ್ಯಾತ ನಟಿ💞
😍ಹಸೆಮಣೆ ಏರಲು ಸಜ್ಜಾದ ಖ್ಯಾತ ನಟಿ💞 - ShareChat
. #😍ಹಸೆಮಣೆ ಏರಲು ಸಜ್ಜಾದ ಖ್ಯಾತ ನಟಿ💞
😍ಹಸೆಮಣೆ ಏರಲು ಸಜ್ಜಾದ ಖ್ಯಾತ ನಟಿ💞 - ShareChat
ಮಂಗಳೂರು: ಕ್ಯಾಬ್ ಚಾಲಕನ ಟೆರರಿಸ್ಟ್ ಎಂದ ಮಲಯಾಳಂ ನಟ ಜಯಕೃಷ್ಣನ್ ಬಂಧನಸೆ.09ರಂದು ಮಂಗಳೂರಿಗೆ ಬಂದಿದ್ದ ಜಯಕೃಷ್ಣನ್, ಸಂತೋಷ್ ಅಬ್ರಾಹಂ, ವಿಮಲ್ ಊಬರ್ ಬುಕ್ ಮಾಡಿದ್ದರು. ಊಬರ್ ಕ್ಯಾಬ್ ಚಾಲಕ ಶಫೀಕ್ ಕಾರು ಬುಕ್ ಆಯಿತು. ಕರೆ ಮಾಡಿ ಎಲ್ಲಿಗೆ ಬರಬೇಕು ಎಂದು ಕೇಳಿದಾಗ, ಬೈದಿದ್ದರು. ಕುಟುಂಬದವರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದರು. ಇದರಿಂದ ಕುಪಿತಗೊಂಡ ಶಫೀಕ್ ದೂರು ದಾಖಲು ಮಾಡಿದ್ದರು. ಕೇರಳ ಚಿತ್ರರಂಗದ ಹಿರಿಯ ನಟ ಜಯಕೃಷ್ಣನ್ ಬಂಧನ ಆಗಿದೆ. ಮಂಗಳೂರಿನಲ್ಲಿ ಕ್ಯಾಬ್ ಚಾಲಕನಿಗೆ ಟೆರರಿಸ್ಟ್ ಎಂದು ನಿಂದಿಸಿದ ಆರೋಪ ಅವರ ಮೇಲೆ ಇದೆ. ಜಯಕೃಷ್ಣನ್ ಸೇರಿ ಮೂವರ ಮೇಲೆ ದೂರು ದಾಖಲು ಮಾಡಲಾಗಿತ್ತು. ಈಗ ಪೊಲೀಸರು ನಟನ ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.ಸೆ.09ರಂದು ಮಂಗಳೂರಿಗೆ ಬಂದಿದ್ದ ಜಯಕೃಷ್ಣನ್, ಸಂತೋಷ್ ಅಬ್ರಾಹಂ, ವಿಮಲ್ ಊಬರ್ ಬುಕ್ ಮಾಡಿದ್ದರು. ಊಬರ್ ಕ್ಯಾಬ್ ಚಾಲಕ ಶಫೀಕ್ ಕಾರು ಬುಕ್ ಆಯಿತು. ಕರೆ ಮಾಡಿ ಎಲ್ಲಿಗೆ ಬರಬೇಕು ಎಂದು ಕೇಳಿದಾಗ, ಅವರು ಮೊದಲು ಹಿಂದಿಯಲ್ಲಿ ಮಾತನಾಡಿದ್ದರು. ಶಫೀಕ್ ಕನ್ನಡದಲ್ಲಿ ಮಾತನಾಡಿದಾಗ, ಮಲಯಾಳಂನಲ್ಲಿ ಮಾತನಾಡುವಂತೆ ಜಯಕೃಷ್ಣನ್ ಸೂಚಿಸಿದ್ದರು.ಕರೆ ಮಾಡಿದಾಗ ಅಪ್ಪ-ಅಮ್ಮನಿಗೆ ಬೈದಿದ್ದಾರೆ. ಮುಸ್ಲಿಂ ಟೆರರಿಸ್ಟ್ ಎಂದೆಲ್ಲ ಹೇಳಿದ್ದಾರೆ ಎಂಬುದು ರಫೀಕ್ ಆರೋಪ. ‘ಮುಸ್ಲಿಂ ತೀರ್ವವಾದಿ, ಟೆರರಿಸ್ಟ್ ಅಂತಾ ಅಪಹಾಸ್ಯ ಮಾಡಿದ್ದಾರೆ. ಅವರಿಗೆ ಕಾರು ಬೇಡ. ಕ್ಯಾಬ್​ನವರನ್ನು ಆಟ ಆಡಿಸೋಕೆ ಈ ರೀತಿ ಮಾಡಿದ್ದಾರೆ’ ಎಂದು ರಫೀಕ್ ದೂರಿದ್ದಾರೆ. ಅನೇಕ ಕ್ಯಾಬ್ ಚಾಲಕರಿಗೆ ಜಯಕೃಷ್ಣನ್ ಇದೇ ರೀತಿ ಆಟ ಆಡಿಸಿದ್ದಾರೆ ಎನ್ನಲಾಗಿದೆ. ಕ್ಯಾಬ್ ಬುಕ್ ಮಾಡಿದ ಬಳಿಕ ಕಾರು ಚಾಲಕ 500 ಮೀಟರ್ ದೂರದಲ್ಲಿರುವಾಗ ರೈಡ್​ನ ಕ್ಯಾನ್ಸಲ್ ಮಾಡುತ್ತಿದ್ದರು. ಇದನ್ನು ದಕ್ಷಿಣ ಕನ್ನಡ ಜಿಲ್ಲೆಯ ಆನ್ಲೈನ್ ಟ್ಯಾಕ್ಸಿ ಚಾಲಕರ ಸಂಘ ಮಾಡಿತ್ತು. ಈಗ ಜಯಕೃಷ್ಣನ್ ಅವರ ಬಂಧನ ಆಗಿದೆ.ಜಯಕೃಷ್ಣನ್ ಅವರು 1994ರಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಈಗ ಅವರು ಪೋಷಕ ಪಾತ್ರಗಳ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಕಿರುತೆರೆಯಲ್ಲೂ ಆ್ಯಕ್ಟೀವ್ ಆಗಿದ್ದು, ಧಾರಾವಾಹಿಗಳಲ್ಲಿ ನಟಿಸಿದ್ದಾರೆ #❌ಕ್ಯಾಬ್ ಚಾಲಕನ ಮೇಲೆ ಖ್ಯಾತ ನಟನಿಂದ ದೌರ್ಜನ್ಯ : ಖ್ಯಾತ ನಟ ಅರೆಸ್ಟ್
❌ಕ್ಯಾಬ್ ಚಾಲಕನ ಮೇಲೆ ಖ್ಯಾತ ನಟನಿಂದ ದೌರ್ಜನ್ಯ : ಖ್ಯಾತ ನಟ ಅರೆಸ್ಟ್ - ShareChat
Rain Alert: ಮುಂದಿನ 72 ಗಂಟೆಗಳ ಕಾಲ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಮುನ್ನೆಚ್ಚರಿಕೆ... ಮಳೆ ಆರ್ಭಟ ನೋಡುತ್ತಿದ್ದರೆ ಭಯದ ವಾತಾವರಣ ಸೃಷ್ಟಿಯಾಗಿದೆ, ಎಲ್ಲಿ ನೋಡಿದರೂ ಬರೀ ಈ ಮಳೆಯದ್ದೇ ಅಬ್ಬರ. ನೋಡ ನೋಡುತ್ತಲೇ ಯರ್ರಾಬಿರ್ರಿ ಸುರಿಯಲು ಶುರು ಮಾಡಿರುವ ವರಣದೇವ ಭರ್ಜರಿ ಆರ್ಭಟ ತೋರಿಸುತ್ತಿದ್ದಾನೆ. ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿ, ಹಲವಾರು ಜಿಲ್ಲೆಗಳಲ್ಲಿ ಈಗ ಭಾರಿ ಮಳೆ ಅಬ್ಬರಿಸುತ್ತಿದೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 12 ಗಂಟೆ ಸತತ ಸುರಿದ ಭರ್ಜರಿ ಮಳೆ ನೂರಾರು ಸಮಸ್ಯೆ ಸೃಷ್ಟಿ ಮಾಡಿದೆ. ಹಾಗೇ ಇನ್ನೂ 72 ಗಂಟೆಗಳ ಕಾಲ ಮತ್ತೆ ಭಾರಿ ಮಳೆ ಸುರಿಯುವ ಮುನ್ಸೂಚನೆ ಸಿಕ್ಕಿದೆ. ಮಳೆರಾಯ ಸಾಕು ನಿಲ್ಲಿಸು ಮಾರಾಯ ನಿನ್ನ ರಗಳೆ... ಹಿಂಗೆ ಜನ ಬೇಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಜೋರಾಗಿ ಮಳೆ ಬರಲಿ ದೇವರೆ ಅಂತಾ ಬೇಡುತ್ತಿದ್ದ ಜನರೇ ಇದೀಗ, ಮಳೆಗೆ ಶಾಪ ಹಾಕಿ ನಿಲ್ಲುವಂತಹ ಸ್ಥಿತಿ ನಿರ್ಮಾಣ ಆಗಿದೆ. 2025 ಏಪ್ರಿಲ್ & ಮೇ ತಿಂಗಳಲ್ಲಿ ಶುರು ಆಗಿದ್ದ ಮಳೆ ಅಕ್ಟೋಬರ್ ತಿಂಗಳ ತನಕ ಸುರಿದು ಸಾಕು ಸಾಕು ಎನಿಸಿದೆ. ಇಷ್ಟಾದರೂ ಮತ್ತೆ ಭಾರಿ ಮಳೆಯ ಮುನ್ಸೂಚನೆ ಸಿಕ್ಕಿದೆ. ಅದರಲ್ಲೂ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಕಟ್ಟೆಚ್ಚರ ಕೂಡ ವಹಿಸಲು ಖಡಕ್ ಮುನ್ಸೂಚನೆ ನೀಡಲಾಗಿದೆ. #🛑ಮುಂದಿನ 72 ಗಂಟೆಗಳ ಕಾಲ ಅಬ್ಬರಿಸಲಿದೆ ಭಾರಿ ಮಳೆ!❌
🛑ಮುಂದಿನ 72 ಗಂಟೆಗಳ ಕಾಲ ಅಬ್ಬರಿಸಲಿದೆ ಭಾರಿ ಮಳೆ!❌ - ShareChat
ಜಾತಿ ಗಣತಿಗೆ ಬಂದಾಗ ಎಲ್ಲ ಮಾಹಿತಿಗಳನ್ನೂ ಕೊಟ್ಟರೆ ರೇಷನ್‌ ಕಾರ್ಡ್‌, ಗೃಹಲಕ್ಷ್ಮಿ 2000 ರೂ.ಕಟ್‌ !; ಏನಿದು ಹೊಸ ವಿಷಯ..? ರಾಜ್ಯ ಸರ್ಕಾರವು (State Congress Government) ಸದ್ಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದೆ. ಆದರೆ ಇದನ್ನ ಜಾತಿ ಗಣತಿ (Caste Census) ಎಂದೇ ಕರೆಯಲಾಗುತ್ತಿದೆ. ಜಾತಿ ಗಣತಿ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇರೋದಿಲ್ಲ. ಹೀಗಾಗಿ ರಾಜ್ಯ ಸರ್ಕಾರವು ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಸಮೀಕ್ಷೆ ಹೆಸರಲ್ಲಿ ಜಾತಿ ಗಣತಿ ನಡೆಸುತ್ತಿದೆ ಎಂದು ಬಿಜೆಪಿಗರು ಆರೋಪ ಮಾಡುತ್ತಿದ್ದಾರೆ. ಇದೀಗ ವಿಪಕ್ಷ ನಾಯಕ ಆರ್.ಅಶೋಕ್‌ ಅವರು ಈ ಗಣತಿ ಬಗ್ಗೆ ಅಚ್ಚರಿಯ ವಿಷಯವೊಂದನ್ನ ಹೇಳಿದ್ದಾರೆ. ಆರ್‌.ಅಶೋಕ್‌ ಹೇಳಿದ್ದೇನು? ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸಿದ ಆರ್‌.ಅಶೋಕ್‌ ಅವರು ʼಗ್ಯಾರಂಟಿಗಳಿಂದಾಗಿ ಸರ್ಕಾರದ ಬಳಿ ಹಣ ಇಲ್ಲ. ಎರಡೂವರೆ ವರ್ಷಕ್ಕೇ ಸರ್ಕಾರ ನಡೆಸೋಕೆ ಆಗದ ಸ್ಥಿತಿ ಬಂದಿದೆ. ಎಲ್ಲ ನಿಗಮಗಳಿಗೂ ಹಣ ಕಟ್‌ ಮಾಡಿದ್ದಾರೆ. ಸುಮಾರು 1600 ಕೋಟಿ ರೂಪಾಯಿ ಕಟ್‌ ಮಾಡಿದ್ದಾರೆ. ಪ್ರವಾಹ ಪರಿಸ್ಥಿತಿ ಬಂದಿದೆ..ಆದರೆ ಅಲ್ಲಿನ ಜನರಿಗೆ ಕೊಡಲು ರಾಜ್ಯ ಸರ್ಕಾರದ ಬಳಿ ಹಣ ಇಲ್ಲ. ಕೇಂದ್ರ ಸರ್ಕಾರಕ್ಕೆ ಮನವಿ ಮಾಡ್ತೇವೆ..ಕೋರ್ಟ್‌ಗೆ ಹೋಗ್ತೇವೆ ಎನ್ನುತ್ತಾರೆ. ಆದರೆ ಇಲ್ಲಿ ಹಣ ಇಲ್ಲದಂತೆ ಆಗಿದ್ದು, ಇವರ ಅಚಾತುರ್ಯದಿಂದ. ಆದರೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಇವರಿಗೆ ಪ್ರವಾಹಕ್ಕೆ ಪರಿಹಾರ ಕೊಡಲು ದುಡ್ಡಿಲ್ಲ..ಆದರೆ ಜಾತಿ ಗಣತಿ ನಡೆಸೋಕೆ ಮಾತ್ರ 400 ಕೋಟಿ ರೂಪಾಯಿ ಹಣ ಇದೆʼ ಎಂದು ವ್ಯಂಗ್ಯವಾಡಿದ್ದಾರೆ. ಕುತಂತ್ರ ಮಾಡ್ತಿದೆ ಸರ್ಕಾರ..! ʼರಾಜ್ಯ ಸರ್ಕಾರ ಜಾತಿ ಗಣತಿ ನಡೆಸ್ತಿರೋದ್ರ ಹಿಂದೆ ಕುತಂತ್ರ ಇದೆ. ಗ್ಯಾರಂಟಿ ಹೆಸರಲ್ಲಿ ಕೊಡ್ತಿರೋ 2000 ರೂಪಾಯಿಗಳನ್ನ, ರೇಷನ್‌ ಕಾರ್ಡ್‌, ಸರ್ಕಾರದಿಂದ ಕೊಡುವ ಸಾಲಗಳನ್ನೆಲ್ಲ ಕಟ್‌ ಮಾಡಲು ಈ ಜಾತಿ ಗಣತಿಯನ್ನ ಸರ್ಕಾರ ನಡೆಸುತ್ತಿದೆ. ಇದು ಸಿಎಂ ಸಿದ್ದರಾಮಯ್ಯ ಮಾಡುತ್ತಿರುವ ಕುತಂತ್ರʼ ಎಂದು ಆರ್.ಅಶೋಕ್‌ ಅವರು ಗಂಭೀರ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲ, ʼಸಮೀಕ್ಷೆ, ಗಣತಿಗೆ ಮನೆಗೆ ಬರುವವರಿಗೆ ನಿಮ್ಮ‌ ಬಗ್ಗೆ ಮಾಹಿತಿಯನ್ನ ಕೊಟ್ಟಿದ್ದೇ ಆದ್ರೆ ನಿಮ್ಮ ರೇಷನ್‌ ಕಾರ್ಡ್‌, ನಿಮಗೆ ಸಿಗುವಂಥ ಲೋನ್‌, ಬೆಳೆ ಪರಿಹಾರ, ಅವರೇ ಕೊಡುತ್ತಿರುವ 2000 ರೂಪಾಯಿಗಳೆಲ್ಲವನ್ನೂ ಕಡಿತಗೊಳಿಸುತ್ತಾರೆ. ಇದೀಗ ಗ್ಯಾರಂಟಿ ಯೋಜನೆಗಳಿಗೆ ಹಣ ಸಾಕಾಗುತ್ತಿಲ್ಲ. ಅದನ್ನ ಸರಿದೂಗಿಸಲು ಈ ಸಮೀಕ್ಷೆ ಮಾಡುತ್ತಿದ್ದಾರೆ. ಯಾರ ಬಳಿ ಸೌಕರ್ಯ ಇರುತ್ತದೆಯೋ, ಅವರಿಗೆ ಸೌಲಭ್ಯಗಳನ್ನ ಕಟ್‌ ಮಾಡುವ ಹುನ್ನಾರ ಸರ್ಕಾರದ್ದುʼ ಎಂದೂ ಆರ್‌.ಅಶೋಕ್‌ ತಿಳಿಸಿದ್ದಾರೆ. ʼನಿಮ್ಮ ಮಾಹಿತಿಯನ್ನ ನೀವೇ ಕೊಟ್ಟಿರ್ತೀರಿ..ಸೌಲಭ್ಯ ಯಾಕೆ ಕೊಡ್ತಿಲ್ಲ ಎಂದು ಪ್ರಶ್ನೆ ಮಾಡಿದರೆ, ನೀವೇ ಕೊಟ್ಟ ಮಾಹಿತಿಯನ್ನ ನಿಮಗೆ ತೋರಿಸ್ತಾರೆ. ಇದು ಸರ್ಕಾರಕ್ಕೆ ನೀವು ಕೊಡುವ ಅಫಿಡಿವಿಟ್‌ ಇದ್ದಂತೆʼ ಎಂದು ಅವರು ತಿಳಿಸಿದರು. ʼಸಮೀಕ್ಷೆಗೆ ಬಂದಾಗ ಜನರು ನೋಡಿಕೊಂಡು ಮಾಹಿತಿ ಕೊಡಿ. ನನ್ನತ್ರ ಚೈನು ಇದೆ, ಉಂಗುರ ಇದೆ..ನನ್ನತ್ರ ಓಲೆ ಇದೆ ಎಂದು ಮಾಹಿತಿ ಕೊಟ್ಟರೆ, ಖಂಡಿತ ರೇಷನ್‌ ಕಾರ್ಡ್‌, 2000 ರೂಪಾಯಿ ಎಲ್‌ ತೆಗೆದುಹಾಕ್ತಾರೆ. ಸಮೀಕ್ಷೆಗೆ ಬಂದಾಗ ಮಾಹಿತಿ ಕೊಡಬೇಕು ಅನ್ಸಿದ್ರೆ ಕೊಡಿ..ಬಿಟ್ರೆ ಬಿಡಿ ಎಂದು ಈಗಾಗಲೇ ಹೈಕೋರ್ಟ್‌ ಹೇಳಿದೆ. ಇನ್ನು ಯಾವುದೇ ಕಾಲಂ ನಲ್ಲಿ ಇರುವ ಪ್ರಶ್ನೆಗೆ ನೀವು ಉತ್ತರ ಕೊಡಬಾರದು ಅನ್ನಿಸಿದ್ರೆ, ಕೊಡಬೇಡಿ. ನಾನೂ ಹಾಗೇ ಮಾಡ್ತೇನೆ..ನೀವೂ ಹಾಗೇ ಮಾಡಿʼ ಎಂದು ಆರ್‌.ಅಶೋಕ್‌ ಕಿವಿಮಾತು ಹೇಳಿದ್ದಾರೆ. #🚨ಯಜಮಾನಿಯರಿಗೆ ಬಿಗ್ ಶಾಕ್ : ಗೃಹಲಕ್ಷ್ಮಿಯರ 2000 ಹಣಕ್ಕೆ ಬ್ರೇಕ್ ❌
🚨ಯಜಮಾನಿಯರಿಗೆ ಬಿಗ್ ಶಾಕ್ : ಗೃಹಲಕ್ಷ್ಮಿಯರ 2000 ಹಣಕ್ಕೆ ಬ್ರೇಕ್  ❌ - ಕಾಂಗ್ರೆಸ್ ಗ್ಯಾರಂಟಿ ಗೃಹಲB೬ ಪರತ ಯಜಮಾನಿಗೆ ಪ್ರತಿತಿಂಗಳು ೊ {2,000 ಕಾಂಗ್ರೆಸ್ ಗ್ಯಾರಂಟಿ ಗೃಹಲB೬ ಪರತ ಯಜಮಾನಿಗೆ ಪ್ರತಿತಿಂಗಳು ೊ {2,000 - ShareChat
ಕಾಲು ಜಾರಿ ಬಿದ್ದ ಹಿರಿಯ ನಟ ಎಂ.ಎಸ್. ಉಮೇಶ್: ಆಸ್ಪತ್ರೆಗೆ ದಾಖಲು ಕನ್ನಡ ಚಿತ್ರರಂಗದ ಹಿರಿಯ ನಟ ಎಂ.ಎಸ್. ಉಮೇಶ್ (MS Umesh) ಅವರು ಸ್ನಾನದ ಮನೆಯಲ್ಲಿ ಕಾಲು ಜಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಜೆ.ಪಿ ನಗರದ ನಿವಾಸದಲ್ಲಿ ಅವರು ಜಾರಿ ಬಿದ್ದಿದ್ದಾರೆ. ಅದರ ಪರಿಣಾಮವಾಗಿ ಉಮೇಶ್ ಅವರ ಸೊಂಟ ಹಾಗೂ ಭುಜದ ಭಾಗಕ್ಕೆ ಪೆಟ್ಟಾಗಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿದೆ. ಪೆಟ್ಟಾಗಿರುವುದರಿಂದ ಅವರಿಗೆ ಸರ್ಜರಿ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 1960ರ ದಶಕದಿಂದಲೂ ಉಮೇಶ್ ಅವರು ಕನ್ನಡ ಚಿತ್ರರಂಗದಲ್ಲಿ (Kannada Film Industry) ಸಕ್ರಿಯರಾಗಿದ್ದಾರೆ. ಈಗಲೂ ಕೂಡ ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರು ಬೇಗ ಚೇತರಿಕೆ ಕಾಣಲಿ ಎಂದು ಆಪ್ತರು ಮತ್ತು ಅಭಿಮಾನಿಗಳು ಹಾರೈಸುತ್ತಿದ್ದಾರೆ. #"💔ಆಸ್ಪತ್ರೆಗೆ ದಾಖಲಾದ ಕನ್ನಡದ ಹಿರಿಯ ನಟ : ಸ್ಥಿತಿ ಗಂಭೀರ!😭
"💔ಆಸ್ಪತ್ರೆಗೆ ದಾಖಲಾದ ಕನ್ನಡದ ಹಿರಿಯ ನಟ : ಸ್ಥಿತಿ ಗಂಭೀರ!😭 - ShareChat
ನಟ ದರ್ಶನ್‌ ಸಾಕಿದ್ದ ಕುದುರೆ ಮಾರಾಟಕ್ಕಿಟ್ಟ ಕುಟುಂಬಸ್ಥರು, ಕಾರಣ ಇಲ್ಲಿದೆ ನಟ ದರ್ಶನ್‌ ತೂಗುದೀಪ ಅವರು ಪ್ರಾಣಿಪ್ರಿಯರಾಗಿಯೂ ಗಮನ ಸೆಳೆದಿದ್ದರು. ಇದಕ್ಕೆ ಸಾಕ್ಷಿ ಎನ್ನುವಂತೆ ಮೈಸೂರಿನಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ವೈವಿಧ್ಯಮಯ ಪ್ರಾಣಿ-ಪಕ್ಷಿಗಳನ್ನು ಅವರು ಸಾಕಿರುವುದು ಗೊತ್ತೇ ಇದೆ. ಆದರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಮತ್ತೆ ಜೈಲಿಗೆ ಮರಳಿದ್ದಾರೆ. ಈ ನೋವಿನಲ್ಲೇ ಅವರ ಕುಟುಂಬ ಕೂಡ ದಿನಗಳನ್ನು ದೂಡುತ್ತಿದೆ. ಇದೀಗ ದರ್ಶನ್‌ ಪ್ರೀತಿಯಿಂದ ಸಾಕಿದ್ದ ಕುದುರೆಗಳನ್ನು ಮಾರಾಟ ಮಾಡಲು ಅವರ ಕುಟುಂಬಸ್ಥರು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣವೇನು ಎಂದು ಅವರ ಮ್ಯಾನೇಜರ್‌ ವಿಡಿಯೋದಲ್ಲಿ ಹೇಳಿದ್ದಾರೆ.ಮೈಸೂರಿನಲ್ಲಿರುವ ದರ್ಶನ್‌ ಅವರ ಫಾರ್ಮ್‌ಹೌಸ್‌ನಲ್ಲಿ ಕುದುರೆಗಳನ್ನು ಸಾಕಿದ್ದರು. ಬಿಡುವಾದಾಗೆಲ್ಲ ಅಲ್ಲಿಗೆ ತೆರಳಿ ಕುದುರೆ ಸವಾರಿಯೂ ಮಾಡುತ್ತಿದ್ದರು. ಈ ಕುದುರೆಗಳು ಅಂದ್ರೆ ದರ್ಶನ್‌ ಅವರಿಗೆ ಸಿಕ್ಕಾಪಟ್ಟೆ ಇಷ್ಟ ಎಂದೇ ಹೇಳಲಾಗಿತ್ತು. ಪ್ರತಿ ಸಂಕ್ರಾಂತಿಯಂದು ಅದ್ದೂರಿಯಾಗಿ ಹಬ್ಬ ಆಚರಿಸುತ್ತಿದ್ದರು. ಕೊಲೆ ಕೇಸ್‌ನಲ್ಲಿ ಜಾಮೀನು ಸಿಕ್ಕಾಗಲೂ ದರ್ಶನ್‌ ಈ ಫಾರ್ಮ್‌ಹೌಸ್‌ನಲ್ಲೇ ವಿಶ್ರಾಂತಿ ಪಡೆದಿದ್ದರು. ಈಗ ಅವರ ನೆಚ್ಚಿನ ಕುದುರೆಗಳು ಮಾರಾಟಕ್ಕೆ ಇಡಲಾಗಿದೆ.ದರ್ಶನ್‌ ಫಾರ್ಮ್‌ಹೌಸ್‌ನಲ್ಲಿರುವ ಬೋರ್ಡ್‌ನಲ್ಲಿಯೂ ಕುದುರೆ ಮಾರಾಟಕ್ಕಿದೆ ಎಂದು ಜಾಹೀರಾತು ನೀಡಲಾಗಿದೆ. ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ದರ್ಶನ್‌ ಅವರು ಪ್ರಾಣವೇ ಇಟ್ಟುಕೊಂಡಿದ್ದ ಈ ಕುದುರೆಗಳನ್ನು ದಿಢೀರ್‌ ಮಾರಾಟ ಮಾಡಲು ಕಾರಣವೇನು ಎಂದು ಅವರ ಅಭಿಮಾನಿಗಳು ಶಾಕ್‌ಗೆ ಒಳಗಾಗಿದ್ದರು. ಇದಕ್ಕೆ ಅವರ ಮ್ಯಾನೇಜರ್‌ ಸ್ಪಷ್ಟನೆ ನೀಡಿದ್ದಾರೆ.ಕೆಲ ವರ್ಷಗಳ ಹಿಂದೆ ತಮ್ಮ ನೆಚ್ಚಿನ ಕುದುರೆ ಸ್ಯಾಂಡಿ ಮೃತಪಟ್ಟಾಗ ದರ್ಶನ್‌ ನೊಂದಿದ್ದರು.ಅದರ ನೆನಪಿಗಾಗಿ ಕುದುರೆಯ ಟ್ಯಾಟೋ ಕೂಡ ಹಾಕಿಸಿಕೊಂಡಿದ್ದರು. ಈಗ ಕುದುರೆ ಮಾರಾಟಕ್ಕಿಟ್ಟಿರುವ ಬಗ್ಗೆ ಮಾತನಾಡಿರುವ ಮ್ಯಾನೇಜರ್‌, ದರ್ಶನ್‌ ಸರ್‌ ತೊಂದರೆಯಲ್ಲಿರುವ ಕಾರಣಕ್ಕೆ ಕುದುರೆ ಮಾರಾಟಕ್ಕಿಟ್ಟಿದ್ದಾರೆ ಎಂದೆಲ್ಲ ಸುದ್ದಿ ಹರಿದಾಡುತ್ತಿದೆ.ಇದು ನಮ್ಮ ಕೆಟ್ಟ ಸಮಯ, ಏನೂ ಮಾಡೋಕಾಗಲ್ಲ. ಒಳ್ಳೆಯವರಿಗೆ ಒಳ್ಳೆಯದೇ ನಡೆಯುತ್ತೆ ಎಂದಿದ್ದಾರೆ.ಯಜಮಾನ್ರು ಹೊರಗಡೆ ಇದ್ದಾಗ ಎಷ್ಟು ಜನರ ಬದುಕು ನಡೀತಿತ್ತು ಅನ್ನೋದು ಗೊತ್ತಿದೆ. ಲಾಕ್‌ಡೌನ್‌ ಸಮಯದಲ್ಲಿ ಮೂಕಪ್ರಾಣಿಗಳ ಬಗ್ಗೆ ಅವರು ಧ್ವನಿ ಎತ್ತಿದ್ದರು. ದಯವಿಟ್ಟು, ತೋಟದ ವಿಚಾರವಾಗಿ, ಫ್ಯಾಮಿಲಿ ವಿಚಾರವಾಗಿ ತಪ್ಪು ಸಂದೇಶ ಕೊಡಬೇಡಿ. ಈಗ ಈ ತೋಟ ನೋಡಿಕೊಳ್ತಿರೋದು ನಾನೇ, ಸುಮ್ಮನೆ ಕುದುರೆ ಮಾರಾಟಕ್ಕಿದೆ ಅಂತ ಹೇಳ್ತಿದ್ದಾರೆ. ಆ ಬೋರ್ಡ್‌ ಹಾಕಿರೋದು ಈಗಲ್ಲ, ಒಂದು ವರ್ಷದಿಂದಲೂ ಹಾಗೇಯೇ ಇದೆ ಎಂದು ಹೇಳಿದ್ದಾರೆ.ಕೆಲವರಿಗೆ ಕುದುರೆ ಸಾಕುವ ಆಸೆ ಇರುತ್ತೆ. ಅವರು ಯಾರನ್ನು ಸಂಪರ್ಕ ಮಾಡಬೇಕು ಅಂತ ಗೊತ್ತಿರಲ್ಲ. ಕೆಲವರು ಕುದುರೆ ಖರೀದಿಸುವಾಗ ಮೋಸ ಹೋಗ್ತಾರೆ. ಇದನ್ನು ತಪ್ಪಿಸಲು, ಕುದುರೆ ನಾವೇ ತಂದು ಚೂರ ಲಾಭಕ್ಕೆ ಮಾರೋಣ ಎಂದು ನಮ್ಮ ಯಜಮಾನ್ರೇ ಹೇಳ್ತಿದ್ರು. ಸಾಕುವವರ ಅನುಕೂಲಕ್ಕಾಗಿ ಮಾತ್ರವೇ ಆ ರೀತಿ ಬೋರ್ಡ್‌ ಹಾಕಿದ್ದೀವಿ. ಅದು ಬಿಟ್ಟರೆ ಬೇರೆ ಇನ್ಯಾವ ಉದ್ದೇಶ ಇಲ್ಲ.ಕುದುರೆ ತಂದು ಮಾರುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. #🔴ನಟ ದರ್ಶನ್‌ ಸಾಕಿದ್ದ ಕುದುರೆ ಮಾರಾಟಕ್ಕಿಟ್ಟ ಕುಟುಂಬಸ್ಥರು🐴
🔴ನಟ ದರ್ಶನ್‌ ಸಾಕಿದ್ದ ಕುದುರೆ ಮಾರಾಟಕ್ಕಿಟ್ಟ ಕುಟುಂಬಸ್ಥರು🐴 - ShareChat

ಆಶ್ವಯುಜ ಮಾಸದ ಸಂಕಷ್ಟ ಚತುರ್ಥಿ ವ್ರತವನ್ನು ವಕ್ರತುಂಡ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. 2025ರ ವಕ್ರತುಂಡ ಸಂಕಷ್ಟ ಚತುರ್ಥಿಯನ್ನು ಅಕ್ಟೋಬರ್‌ 10ರಂದು ಶುಕ್ರವಾರ ಆಚರಿಸಲಾಗುವುದು. 2025ರ ವಕ್ರತುಂಡ ಸಂಕಷ್ಟ ಚತುರ್ಥಿ ಪೂಜೆಗೆ ಶುಭ ಮುಹೂರ್ತ ಯಾವುದು.? ವಕ್ರತುಂಡ ಸಂಕಷ್ಟ ಚತುರ್ಥಿ ಪೂಜೆ ವಿಧಿ - ವಿಧಾನಗಳು ಯಾವುವು.? ಸಂಕಷ್ಟ ಚತುರ್ಥಿ ಮಂತ್ರ ಹಾಗೂ ಮಹತ್ವವಿದು. ಗಣೇಶನಿಗೆ ಸಮರ್ಪಿತವಾದ 13 ಸಂಕಷ್ಟಿ ಚತುರ್ಥಿ ಉಪವಾಸಗಳಲ್ಲಿ ವಕ್ರತುಂಡ ಸಂಕಷ್ಟ ಚತುರ್ಥಿ ತುಂಬಾನೇ ಪ್ರಮುಖವಾದ ವ್ರತವಾಗಿದೆ. ಈ ಪವಿತ್ರ ವ್ರತವು ಗಣಪತಿಯ ವಕ್ರತುಂಡ ರೂಪದ ಪೂಜೆಗೆ ಸಮರ್ಪಿಸಲಾಗಿದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ವಕ್ರತುಂಡವು ಅಷ್ಟ ವಿನಾಯಕರ ರೂಪದಲ್ಲಿ ಗಣೇಶನ ಮೊದಲ ರೂಪವಾಗಿದೆ. ಮುದ್ಗಲ ಪುರಾಣವು ಮತ್ಸರಾಸುರ ಎಂಬ ರಾಕ್ಷಸನನ್ನು ವಧಿಸಲು ಗಣೇಶನು ವಕ್ರತುಂಡ ರೂಪವನ್ನು ತೆಗೆದುಕೊಂಡನು ಎಂದು ಹೇಳುತ್ತದೆ. ಆದರೆ ಇತರ ದಂತಕಥೆಗಳು ಇಂದ್ರ ಮತ್ತು ಇತರ ದೇವತೆಗಳನ್ನು ರಾಕ್ಷಸ ದಂಭಾಸುರನಿಂದ ರಕ್ಷಿಸಲು ಗಣೇಶನು ವಕ್ರತುಂಡ ಅವತಾರವನ್ನು ತೆಗೆದುಕೊಂಡರು ಎಂದು ಹೇಳುತ್ತದೆ. ಈ ವರ್ಷ, ವಕ್ರತುಂಡ ಸಂಕಷ್ಟ ಚತುರ್ಥಿ ವ್ರತವನ್ನು ಅಕ್ಟೋಬರ್‌ 10ರಂದು ಶುಕ್ರವಾರದ ದಿನ ಆಚರಿಸಲಾಗುವುದು. 2025ರ ಅಕ್ಟೋಬರ್‌ ತಿಂಗಳಿನಲ್ಲಿ ಆಚರಿಸಲಾಗುವ ವಕ್ರತುಂಡ ಸಂಕಷ್ಟ ಚತುರ್ಥಿ 2025ರ ಕುರಿತಾದ ಮಾಹಿತಿ ಹೀಗಿದೆ. #🙏ಸಂಕಷ್ಟಿ ಚತುರ್ಥಿ 🕉️
🙏ಸಂಕಷ್ಟಿ ಚತುರ್ಥಿ 🕉️ - నెంశెష్టి ಚತುರ್ಥಿ నెంశెష్టి ಚತುರ್ಥಿ - ShareChat
ನಟ ರಜನೀಕಾಂತ್‌ 'ಜೈಲರ್ 2' ಚಿತ್ರೀಕರಣದ ನಡುವೆ ಹಿಮಾಲಯಕ್ಕೆ ಆಧ್ಯಾತ್ಮಿಕ ಪ್ರವಾಸ ಕೈಗೊಂಡಿದ್ದಾರೆ. ಅವರು ತಮ್ಮ ಆಪ್ತ ಸ್ನೇಹಿತರೊಂದಿಗೆ ಸಿನಿಮಾದ ಕೆಲಸದಿಂದ ವಿರಾಮ ಪಡೆದು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದರು. ಋಷಿಕೇಶದ ಸ್ವಾಮಿ ದಯಾನಂದ ಆಶ್ರಮಕ್ಕೆ ಭೇಟಿ ನೀಡಿ ಧ್ಯಾನ ಮಾಡಿದರು. ಗಂಗಾ ನದಿಯ ದಡದಲ್ಲಿ ಆರತಿಯಲ್ಲಿ ಭಾಗವಹಿಸಿದರು. ನಂತರ ದ್ವಾರಾಹಾತ್‌ಗೆ ಪ್ರಯಾಣಿಸಿದರು. ರಸ್ತೆಬದಿಯಲ್ಲಿ ಸರಳವಾಗಿ ಊಟ ಸವಿದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಅವರ ಸರಳ ಜೀವನಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ನಟ ರಜನೀಕಾಂತ್‌ ಅವರು ಆಗಾಗ ಹಿಮಾಲಯಕ್ಕೆ ಹೋಗಿ ಏಕಾಂತದಲ್ಲಿ ಕಾಲ ಕಳೆಯುತ್ತಾರೆ. ಇದೀಗ ಅವರು ಮತ್ತೊಮ್ಮೆ ಹಿಮಾಲಕ್ಕೆ ತೆರಳಿದ್ದಾರೆ. ಅಚ್ಚರಿಯೆಂದರೆ ಸಿಮಿಮಾ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿರುವ ರಜನೀಕಾಂತ್‌ ತಮ್ಮ ಸಿನಿ ಜೀವನದಿಂದ ಒಂದು ಬ್ರೇಕ್‌ ಪಡೆದುಕೊಂಡಿದ್ದಾರೆ. ಸಿನಿಮಾದ ಗೋಜಲವನ್ನು ಬಿಟ್ಟು ಹಿಮಾಲಯದ ಪುಣ್ಯಕ್ಷೇತ್ರಗಳಲ್ಲಿ ಕಾಲಕಳೆಯುತ್ತಿದ್ದಾರೆ. ರಜನೀಕಾಂತ್‌ ಅವರು ತಮ್ಮ ಆಪ್ತ ಸ್ನೇಹಿತರೊಂದಿಗೆ ಹಿಮಾಲಯದಲ್ಲಿ ಆಧ್ಯಾತ್ಮಿಕ ಪ್ರಯಾಣವನ್ನು ಕೈಗೊಂಡಿದ್ದಾರೆ. ಅವರು ಪರ್ವತಗಳಲ್ಲಿದ್ದ ಸಮಯದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿವೆ. #👉ಹಿಮಾಲಯ ಯಾತ್ರೆಗೆ ಹೊರಟ ಸೂಪರ್ ಸ್ಟಾರ್😯
👉ಹಿಮಾಲಯ ಯಾತ್ರೆಗೆ ಹೊರಟ ಸೂಪರ್ ಸ್ಟಾರ್😯 - ShareChat